ಕರ್ನಾಟಕಪ್ರಮುಖ ಸುದ್ದಿ

ಬಿಜೆಪಿಗೆ ಅಭಿನಂದನೆ, ಕಾಂಗ್ರೆಸ್‍ ನೆಲಕಚ್ಚಿಲ್ಲ : ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದೆ ಎನ್ನುವ ಮಾತನ್ನು ನಾನು ಒಪ್ಪುವುದಿಲ್ಲ. ಉತ್ತರ ಪ್ರದೇಶ ಜನತೆಯ ಆದೇಶಕ್ಕೆ ಮನ್ನಣೆ ಕೊಡುತ್ತೇನೆ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ

ಬೆಳಗಾವಿಯಲ್ಲಿ ಮಾತನಾಡಿದ ಅವರು, ಉತ್ತರಾಖಂಡದಲ್ಲಿ ನಮ್ಮದೇ ಪಕ್ಷದ 21 ಶಾಸಕರನ್ನ ಹೈಜಾಕ್ ಮಾಡಿದ ಬಿಜೆಪಿ ತಂತ್ರಗಾರಿಕೆಯಲ್ಲಿ ಗೆದ್ದಿದೆ. ಅವರು ಯಾವುದೇ ಕಾರಣಕ್ಕೆ ಗೆದ್ದಿದ್ದರೂ ಗೆಲುವು ಗೆಲುವೆ. ಹೀಗಾಗಿ ಬಿಜೆಪಿಗೆ ಅಭಿನಂದಿಸುತ್ತೇನೆ ಎಂದರು.

ಸಿ.ಟಿ. ರವಿ ವಿರುದ್ಧ ವಾಗ್ದಾಳಿ

ಅನಾರೋಗ್ಯದ ಹಿನ್ನೆಲೆ ಸೋನಿಯಾ ಗಾಂಧಿಯವರು ವಿದೇಶ ಪ್ರವಾಸ ಕೈಗೊಂಡ ವಿಚಾರದಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ ಬಹಳ ಕೆಟ್ಟದಾಗಿ ಟ್ವಿಟ್ ಮಾಡಿದ್ದಾರೆ. ಅವರ ವರ್ತನೆಯನ್ನು ನಾನು ಖಂಡಿಸುತ್ತೇನೆ. ಸಿ.ಟಿ.ರವಿ ಅವರಿಗೆ ಮಾನಸಿಕ ಅಸ್ವಸ್ಥತೆ ಕಾಡುತ್ತಿರಬಹುದು. ಅವರು ಹುಚ್ಚಾಸ್ಪತ್ರೆಗೆ ಸೇರಲು ಅರ್ಹ ವ್ಯಕ್ತಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರ ವಾಗ್ದಾಳಿ ನಡೆಸಿದರು.

ಪ್ರತಿಯೊಂದನ್ನೂ ರಾಜಕೀಯ ಚಷ್ಮಾ ಹಾಕಿಕೊಂಡು ನೋಡಬಾರದು. ಮಾನವಿತೆ ದೃಷ್ಠಿಯಿಂದ ನೋಡುವ ಕನಿಷ್ಠ ಸೌಜನ್ಯವೂ ಒರ್ವ ಶಾಸಕರಾದ ರವಿಗೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

(ಎಸ್‍.ಎನ್‍/ಎನ್‍.ಬಿಎನ್‍)

Leave a Reply

comments

Related Articles

error: