ಮೈಸೂರು

ಜೆಎಸ್ ಎಸ್ ಕಾನೂನು ಕಾಲೇಜಿನಲ್ಲಿ ನ್ಯಾಷನಲ್ ಕಾರ್ಪೋರೇಟ್ ಮೂಟ್ ಕಾಂಪಿಟೇಷನ್

ಮೈಸೂರು,ಫೆ.8:- ಕುವೆಂಪುನಗರದಲ್ಲಿರುವ ಜೆಎಸ್ ಎಸ್ ಕಾನೂನು ಕಾಲೇಜಿನಲ್ಲಿ 18ನೇ ಸುರಾನ ಮತ್ತು ಸುರಾನ ನ್ಯಾಷನಲ್ ಕಾರ್ಪೋರೇಟ್ ಮೂಟ್ ಕಾಂಪಿಟೇಷನ್ 2020ನ್ನು ಕಾಲೇಜಿನ ಸಿಲ್ವರ್ ಜುಬಿಲಿ ಹಾಲ್ ನಲ್ಲಿ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಬಿ.ಎ.ಪಾಟೀಲ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಸ್ಪರ್ಧೆಗಳಿದ್ದಾಗಲೇ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೇರಲು ಸಾಧ್ಯ ಎಂದರು. ಈ ಸಂದರ್ಭ ಹುಬ್ಬಳ್ಳಿಯ ಕೆಎಸ್ ಎಲ್ ಯು ಕುಲಪತಿ ಪಿ.ಈಶ್ವರ ಭಟ್, ಜೆಎಸ್ ಎಸ್ ಮುಖ್ಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ್ ಮಠ್, ಚೆನ್ನೈನ ಎಸ್ ಎಸ್ ಐಎ ಸಿಇಒ ಡಾ.ವಿನೋದ್ ಸುರಾನ, ಜೆಎಸ್ ಎಸ್ ಕಾನೂನು ಕಾಲೇಜಿನ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಸುರೇಶ್, ವಕೀಲ ಡಾ.ಎಸ್.ರವಿಚಂದ್ರನ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: