ಕರ್ನಾಟಕದೇಶಪ್ರಮುಖ ಸುದ್ದಿ

ಉತ್ತರದಲ್ಲಿ ಬಿಜೆಪಿ ಗೆಲುವು : ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ

ಬೆಂಗಳೂರು : ಐದು ರಾಜ್ಯಗಳ ರಾಜ್ಯಗಳ ಚುನಾವಣೆ ಪೈಕಿ ನಾಲ್ಕರಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾರಣ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯಿತು. ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದಲ್ಲಿ 300ಕ್ಕೂ ಸ್ಥಾನಗಳಲ್ಲಿ ಅಭೂತಪೂರ್ವ ಜನಾದೇಶ ಪಡೆದು ಗೆಲುವು ಸಾಧಿಸಿರುವ ಬಿಜೆಪಿ, ಉತ್ತರಾಖ೦ಡದಲ್ಲೂ ಬಹುಮತದೊ೦ದಿಗೆ ಅಧಿಕಾರಕ್ಕೆ ಬ೦ದಿದೆ.

ಪಾರ್ಟಿಯ ಯಶಸ್ಸಿಗೆ ಇ೦ದು ಬೆ೦ಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಕಾರ್ಯಕರ್ತರು ಸ೦ಭ್ರಮಿಸಿದರು. ಈ ಸ೦ದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ಪ್ರಧಾನಮ೦ತ್ರಿ ನರೇ೦ದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನಾಯಕತ್ವಕ್ಕೆ ಈ ಯಶಸ್ಸಿನ ಕೀರ್ತಿ ಸಲ್ಲಬೇಕು. ಕರ್ನಾಟಕದ ಪ್ರತಿಯೊಬ್ಬ ಕಾರ್ಯಕರ್ತ ಮತ್ತು ಬೆ೦ಬಲಿಗರ ಪರವಾಗಿ ನಾನೂ ಅಭಿನ೦ದನೆಗಳನ್ನು ಸಲ್ಲಿಸುತ್ತೇನೆ ಎಂದರು.

(ಎಸ್‍.ಎನ್‍/ಎನ್‍.ಬಿಎನ್‍)

Leave a Reply

comments

Related Articles

error: