ಕರ್ನಾಟಕ

ಬೆಂಗಳೂರು: ಕಲ್ಕೆರೆ ಕೆರೆಯಲ್ಲಿ ತೆಪ್ಪ ಮುಗುಚಿ ಟೆಕ್ಕಿ ನಾಪತ್ತೆ

ಬೆಂಗಳೂರು,ಫೆ.8-ಕಲ್ಕೆರೆ ಕೆರೆಯಲ್ಲಿ ತೆಪ್ಪ ಮುಗುಚಿ ಟೆಕ್ಕಿಯೊರ್ವ ಕಣ್ಮರೆಯಾಗಿರುವ ಘಟನೆ ರಾಮಮೂರ್ತಿ ನಗರದಲ್ಲಿ ನಡೆದಿದೆ.

ಕಣ್ಮರೆಯಾಗಿರುವ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಸಚಿನ್ ಗಾಗಿ ಅಗ್ನಿಶಾಮಕ ದಳ ಮತ್ತು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಸಚಿನ್ ಹಾಗೂ ಉಲ್ಲಾಸ್ ಎಂಬ ಇಬ್ಬರು ಟೆಕ್ಕಿಗಳು ಶುಕ್ರವಾರ ರಾತ್ರಿ ಪಾರ್ಟಿ ಮಾಡಲು ಕಲ್ಕೆರೆ ಕೆರೆಗೆ ತೆರಳಿದ್ದರು. ಪಾರ್ಟಿ ಮುಗಿಸಿ ಕೆರೆಯಲ್ಲಿ ಟೆಕ್ಕಿಗಳು ತೆಪ್ಪದಲ್ಲಿ ವಿಹಾರಕ್ಕೆ ತೆರಳಿದ್ದರು. ಈ ವೇಳೆ ತೆಪ್ಪ ಮಗುಚಿ ನೀರಿಗೆ ಬಿದ್ದಿದ್ದಾರೆ. ಉಲ್ಲಾಸ್ ಈಜಿ ದಡ ಸೇರಿದ್ದಾರೆ. ಆದರೆ ಸಚಿನ್ ಕಣ್ಮರೆಯಾಗಿದ್ದಾರೆ. ಸಚಿನ್ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ರಾಮಮೂರ್ತಿ ನಗರ ಠಾಣೆಯಲ್ಲಿ ಈ ಘಟನೆ ನಡೆದಿದೆ. (ಎಂ.ಎನ್)

 

Leave a Reply

comments

Related Articles

error: