ಮೈಸೂರು

ಚಾಂಪಿಯನ್ ಬಿಜಾಪುರ ಬುಲ್ಸ್ ನ ಕೆಪಿಎಲ್ ಬೇಟೆ

naveen-mg-scored-52-for-bijapur-bulls-webಸೈಕಲ ಪ್ಯೂರ್ ಅಗರಬತ್ತಿ ಅರ್ಪಿಸುವ ಕಾರ್ಬನ್ ಕೆ.ಪಿ.ಎಲ್ 5ನೇ ಆವೃತ್ತಿಯಲ್ಲಿ ಸೋಮವಾರದಂದು ನಡೆದ ಚಾಂಪಿಯನ್ ಬಿಜಾಪುರ ಬುಲ್ಸ್ ಹಾಗೂ ರಾಕ್ ಸ್ಟಾರ್ ನಡುವಿನ ಪಂದ್ಯದಲ್ಲಿ 68 ರನ್ ಗಳ ಭಾರಿ ಆಗಾಧ ಮೊತ್ತದ ಅಂತರದಲ್ಲಿ ಬಿಜಾಪುರ ಬುಲ್ಸ್ ಜಯಭೇರಿ ಭಾರಿಸುವುದರೊಂದಿಗೆ ತಂಡವು ನಾಕೌಟ್ ಹಂತ ತಲುಪಿದೆ.

ರಾಕ್ ಸ್ಟಾರ್ಸ್ ತಂಡ ಮೊದಲಿಗೆ ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡು ಬಲವಾದ ಬೌಲಿಂಗ್ ನೊಂದಿಗೆ ಅಕ್ರಮಣಕಾರಿ ದಾಳಿ ನಡೆಸಿದರು, ರನ್ ಗಳನ್ನು ತಡೆಯಲು ವಿಫಲವಾಯಿತು. ನವೀನ್ ಎಂ.ಜಿ. 3ಸಿಕ್ಸ್ ಹಾಗೂ 2 ಬೌಂಡರಿ ಸೇರಿದಂತೆ ಒಟ್ಟು 52 ರನ್ ಗಳನ್ನು ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಆರಂಭಿಕ ಆಟಗಾರ ಭರತ್ ಚಿಪ್ಲಿ 27 ಬಾಲ್ ಗಳಿಂದ 32 ರನ್ ಗಳಿಸುವ ಮೂಲಕ ತಂಡದ ಮೊತ್ತ 8 ವಿಕೆಟ್ ನಷ್ಟದೊಂದಿಗೆ 175 ರನ್ ಗಳನ್ನು ಕಲೆ ಹಾಕಿದರು.

ರಾಕ್ ಸ್ಟಾರ್ಸ್ ತಂಡ 20 ಓವರ್ ಗಳಿಗೆ ಕೇವಲ 107 ರನ್ ಗಳಿಸಿ ಸರ್ವ ಪತನಗೊಂಡಿತು. ಆರಂಭದಲ್ಲಿ ಬಿ.ಆರ್.ಶರತ್ 21 ಬಾಲ್ ಗೆ 24 ರನ್ ಸೇರಿಸಿದರು, ಚರಣ್ ತೇಜಾ ಪ್ರತಿರೋಧವೊಡ್ಡುವ ಪ್ರಯತ್ನ ಮಾಡಿ 17 ಬಾಲ್ ಗೆ  2 ಸಿಕ್ಸ್ ಹಾಗೂ ಬೌಂಡರಿ ಸಿಡಿಸಿ 28ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಿಜಾಪುರ ಬುಲ್ಸ್ ಪರ ಲೆಗ್ ಸ್ಪಿನ್ನರ್ ಸಿನಾನ್ ಅಬ್ದುಲ್ ಖಾದಿರ್ 81ಕ್ಕೆ 3 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು.

ಸಂಕ್ಷಿಪ್ತ ಸ್ಕೋರ್ ವಿವರ  :

ಬಿಜಾಪುರ ಬುಲ್ಸ್ 20 ಓವರ್ ಗಳಲ್ಲಿ 175/8  (ಎಂ.ಜಿ.ನವೀನ್ 52, ಭರತ್ ಚಿಪ್ಲಿ 32, ರಾಜುಗೌಡ 24ಕ್ಕೆ 3, ಚರಣ್ ತೇಜಾ 22ಕ್ಕೆ2,

ರಾಕ್ ಸ್ಟಾರ್ಸ್ : 20 ಓವರ್ ಗಳಲ್ಲಿ 107 ರನ್ (ಬಿ.ಆರ್.ಶರತ್ 24, ಚರಣ್ ತೇಜಾ, ಸಿನಾನ್ ಅಬ್ದುಲ್ ಖಾದಿರ್ 18ಕ್ಕೆ 3, ಆಶಾದೀಪ ಸಿಂಗ್ 19 ಕ್ಕೆ 2 ಗಳಿಸಿದರು.

 

Leave a Reply

comments

Tags

Related Articles

error: