ಮೈಸೂರು

ದೌರ್ಜನ್ಯ ತಡೆಯಲು ಶಿಕ್ಷಣವೊಂದೇ ಅಸ್ತ್ರ : ಎ.ಜ್ಯೋತಿ

ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ರೋಟರಿ ಮಿಡ್ ಟೌನ್ ಸಭಾಂಗಣದಲ್ಲಿ ಜನನಸಂಗ್ರಾಮ ಪರಿಷತ್, ಶಾಂತ ಕ್ಯಾನ್ಸರ್ ಚಾರಿಟೆಬಲ್ ಟ್ರಸ್ಟ್ ಸಹಯೋಗದಲ್ಲಿ ಶನಿವಾರ  ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿಚಾರ ಸಂಕಿರಣ ಮತ್ತು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಅಭಿನಂದನಾ ಸಮಾರಂಭದಲ್ಲಿ ಕಳೆದ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಇಂಚರ, ಪಿಎಚ್‍ಡಿ ಪದವಿ ಪೂರೈಸಿರುವ ದೃಷ್ಟಿವಿಕಲಚೇತನ ಯುವತಿ ಡಾ.ಕಾವ್ಯಶ್ರೀ, ಯಶಸ್ವಿ ಮಹಿಳಾ ಸಂಘಟಕಿ ಸುಜಾತ, ರುಧ್ರಭೂಮಿ ಕಾಯುವ ಯಶೋಧ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಾರತದ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆ ಎ. ಜ್ಯೋತಿ  ಮಾತನಾಡಿ ದೌರ್ಜನ್ಯಗಳನ್ನು  ದೂರಗೊಳಿಸಲು ಶಿಕ್ಷಣವೇ ಅಸ್ತ್ರವಾಗಿದ್ದು, ಎಲ್ಲ ಮಹಿಳೆಯರು ಸುಶಿಕ್ಷಿತರಾಗಬೇಕು ಎಂದರು. ಹೆಣ್ಣು ಮಕ್ಕಳು ಆರ್ಥಿಕವಾಗಿ ಸಬಲರಾಗಲು ಅವರಿಗೆ ಉದ್ಯೋಗ ಉದ್ಯೋಗ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ದೊರಕಿಸಿಕೊಡಬೇಕು ಎಂದರು.

ಲೇಖಕಿ ರೂಪ ವೆಂಕಟೇಶ್, ಮನೋರೋಗ ಹಾಗೂ ಮಕ್ಕಳ ತಜ್ಞೆ ಡಾ.ಸಾರಿಕಾ ಪ್ರಸಾದ್, ಜನ ಸಂಗ್ರಾಮ ಪರಿಷತ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಮತ್ತಿತರರು ಪಾಲ್ಗೊಂಡಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: