ಮೈಸೂರು

ಮೈಸೂರು ಮತ್ತು ನಶುಹಾ ನಗರಗಳ ನಡುವೆ ಒಡಂಬಡಿಕೆಗೆ ಸಿದ್ಧತೆ

ಮೈಸೂರು: ಮೈಸೂರು ದೇಶದಲ್ಲೇ ಅತ್ಯಂತ ಸ್ವಚ್ಛ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇದೀಗ ಅಮೇರಿಕದ ನ್ಯೂ ಹಂಫಶೈರ್ ರಾಜ್ಯದ ನಶುಹಾ ಜೊತೆ  ಪರಸ್ಪರ ಒಡಂಬಡಿಕೆಗೆ ಸಿದ್ಧತೆ ನಡೆಸಿದ್ದು, ವಿಡಿಯೋ ಕಾನ್ಫರೆನ್ಸ್ ನಡೆಯಿತು.

ಮನಪಾ ಮೇಯರ್ ಭೈರಪ್ಪ, ಆಯುಕ್ತ ಜಗದೀಶ್ , ಮೈಸೂರು ಚೆಂಬರ್ಸ್ ಆಫ್ ಕಾಮರ್ಸ್, ಎಂಸಿಸಿಐ ಮಾಜಿ ಅಧ್ಯಕ್ಷ ಆರ್.ಕೃಷ್ಣ ಮತ್ತು ನಶುಹಾ ನಗರದ ಮೇಯರ್ ಜಿಮ್ ಡಾಂಚೆಸ್, ನಶುಹಾ ನಗರ ಚೆಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ತ್ರಾಸಿ ಹ್ಯಾಚ್, ಎಂಎಲ್ ಎ ಲತಾ ಮಂಜಿಪುಡಿ ಮತ್ತಿತರರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡಿದ್ದರು.

ಮೈಸೂರು ಎರಡೆರಡು ಬಾರಿ ಸ್ವಚ್ಛ ನಗರವೆಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಮೈಸೂರು ಶಿಕ್ಷಣ, ಆರೋಗ್ಯ, ಮತ್ತು ಪ್ರವಾಸೋದ್ಯಮ ಎಲ್ಲದರಲ್ಲಿಯೂ ವಿಶಿಷ್ಠತೆಯನ್ನು ಹೊಂದಿದೆ ಎಂದು ಮೇಯರ ಭೈರಪ್ಪ ತಿಳಿಸಿದರು.

ನಶುಹಾ ನಗರದ ಮೇಯರ್ ಜಿಮ್ ಡಾಂಚೆಸ್ ಮಾತನಾಡಿ 2017ರ ಜನವರಿಯಲ್ಲಿ ನಿಯೋಗ ಆಗಮಿಸಿ ಪ್ರಸ್ತಾಪಿಸಲಿದೆ ಎಂದರು. ಲತಾ ಮಂಜಿಪುಡಿ ಮಾತನಾಡಿ ನಶುಹಾ ನಗರವು ಚಿಕ್ಕ ಉದ್ಯಮಗಳಿಗೆ ಸೂಕ್ತ ಭದ್ರತೆಯ ಜೊತೆ ಹೆಸರಾಗಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಜೊತೆ ಮೈಸೂರು ಮತ್ತು ನಶುಹಾ ನಗರಗಳನ್ನು ಸಹೋದರಿ ಸಿಟಿಗಳನ್ನಾಗಿಸುವ ಕುರಿತು ಮಾತನಾಡಲಾಗಿದೆ. ಉದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.

ಆರ್.ಕೃಷ್ಣ ಮಾತನಾಡಿ ಈ ಎರಡೂ ನಗರಗಳ ನಡುವೆ ಒಡಂಬಡಿಕೆಗೆ ಸಿದ್ಧತೆ ನಡೆಸಲಾಗುತ್ತಿದೆ. ಈ ಕುರಿತು ನಶುಹಾ ನಗರದ ಮೇಯರ್ ಲ್ಲಿ ವಿನಂತಿಸುತ್ತೇನೆ ಎಂದರು. ಆಯುಕ್ತ ಜಗದೀಶ್ ಮಾತನಾಡಿ ಒಡಂಬಡಿಕೆಗೂ ಮುನ್ನ ಈ ಕುರಿತು ಸಾಕಷ್ಟು ಚರ್ಚೆಗಳನ್ನು ನಡೆಸಿ ರಾಜ್ಯ ಸರ್ಕಾರದ ಅನುಮತಿಪಡೆದು ಬಳಿಕ ನಿರ್ಧಾರ ಕೈಗೊಳ್ಳಲಾಗುವುದು. ಈಗ ದಸರಾ ಸಮಯವಾದ್ದರಿಂದ ಸಾಧ್ಯವಿಲ್ಲ. ನವಂಬರ್-ಡಿಸೆಂಬರ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ರಸಾದ್ ನೇತೃತ್ವದಲ್ಲಿ ನಿಯೋಗ ತೆರಳಲಿದೆ ಎಂದರು.

ಮೈಸೂರು ಚೆಂಬರ್ ಆಫ್ ಕಾಮರ್ಸ್ ನ ಸದಸ್ಯ ಒ.ಪ್ರತಾಪ್ ಕುಮಾರ್, ಗೌರವ ಕಾರ್ಯದರ್ಶಿ ಎಂ.ಸಿ.ಬನಸಲಿ, ಕೆ.ಬಿ.ಲಿಂಗರಾಜು ಮತ್ತಿತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: