ಮೈಸೂರು

ಅಪರಿಚಿತ ಮಹಿಳೆಯಿಂದ ಪರ್ಸ್ ಕಳುವು

ಮೈಸೂರು,ಫೆ.10:-ಬಸ್ ನಲ್ಲಿದ್ದ ಇಬ್ಬರು ಅಪರಿಚಿತ ಮಹಿಳೆಯರಲ್ಲಿ ಓರ್ವಳು ಮಹಿಳೆಯೋರ್ವರ ಕೈಲಿದ್ದ ಪರ್ಸ್ ಎಗರಿಸಿ ಪರಾರಿಯಾದ ಘಟನೆ ದೊಡ್ಡ ಗಡಿಯಾರದ ಬಳಿ ನಡೆದಿದೆ.

ಈ ಕುರಿತು ಲಷ್ಕರ್ ಪೊಲೀಸ್ ಠಾಣೆಗೆ ಪ್ರೇಮ ಎಂಬವರು ದೂರು ನೀಡಿದ್ದಾರೆ.  ರೈಲ್ವೆ ನಿಲ್ದಾಣದಿಂದ ಸಿಟಿ ಬಸ್ ಹತ್ತಿ ಬರುವಾಗ ಬಸ್ಸಿನಲ್ಲಿ ಇಬ್ಬರು ಅಪರಿಚಿತ ಮಹಿಳೆಯರು   ಜೊತೆಯಲ್ಲಿದ್ದು ದೊಡ್ಡ ಗಡಿಯಾರದ ಬಳಿ ಇಳಿಯುವಾಗ ವಿವೋ ಮೊಬೈಲ್ ಹಾಗೂ ಎಟಿಎಂ ಕಾರ್ಡ್  ಇದ್ದ ಪರ್ಸ್ ಅನ್ನು ಅವರಲ್ಲಿ ಓರ್ವ ಮಹಿಳೆ ಕಿತ್ತುಕೊಂಡು ಓಡಿ ಹೋಗಿದ್ದಾರೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: