ಸುದ್ದಿ ಸಂಕ್ಷಿಪ್ತ

ಫೆ.25 ರಂದು ರಫ್ತು ಜಾಗೃತಿ ಶಿಬಿರ

ರಾಜ್ಯ( ಮಡಿಕೇರಿ) ಫೆ.10 :- ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಮತ್ತು ಮೈಸೂರು ಶಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಡಗು ಇವರುಗಳ ಸಂಯುಕ್ತ ಆಶ್ರಯದಲ್ಲಿ ಕೈಗಾರಿಕೋದ್ಯಮಿಗಳು, ವಾಣಿಜೋದ್ಯಮಿಗಳಿಗೆ ಹಾಗೂ ಭಾವಿ ರಫ್ತುದಾರರಿಗೆ ರಫ್ತು ಉತ್ತೇಜನಾ ಕ್ರಮಗಳ ಕುರಿತ ರಫ್ತು ಜಾಗೃತಿ ಶಿಬಿರವು ಫೆಬ್ರವರಿ, 25 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಕಟ್ಟಡ ಸಭಾಂಗಣದಲ್ಲಿ ನಡೆಯಲಿದೆ.
ಜಾಗೃತಿ ಶಿಬಿರಕ್ಕೆ ಉಚಿತ ಪ್ರವೇಶವಿದ್ದು, ಹೊಸದಾಗಿ ರಫ್ತು ಚಟುವಟಿಕೆಗಳನ್ನು ಕೈಗೊಳ್ಳುವವರಿಗೆ ಈ ಶಿಬಿರವು ತುಂಬಾ ಪ್ರಯೋಜನಾಕಾರಿಯಾಗಿದ್ದು, ರಫ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು. ಆದ್ದರಿಂದ ಜಿಲ್ಲೆಯ ಆಸಕ್ತ ಉದ್ಯಮಿಗಳು ಹಾಗೂ ವಾಣಿಜ್ಯದಾರರು ಜಾಗೃತಿ ಶಿಬಿರದಲ್ಲಿ ಭಾಗವಹಿಸಿ ಮಾಹಿತಿ ಪಡೆಯುವ ಮೂಲಕ ರಾಜ್ಯದ ರಫ್ತು ಬೆಳವಣಿಗೆಗೆ ಸಹಕಾರಿಯಾಗುವಂತೆ ಕೋರಿದೆ. ಹೆಚ್ಚಿನ ವಿವರಗಳಿಗೆ ಈ ಕಚೇರಿಯ ದೂ.ಸಂ.0821–4253409/ ಮೊ.9482499718 ಅಥವಾ ಇಮೇಲ್: [email protected] ಮೂಲಕ ಸಂಪರ್ಕಿಸಬಹುದು ಎಂದು ಮೈಸೂರು ವಿ.ಟಿ.ಪಿ.ಸಿ. ಶಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Leave a Reply

comments

Related Articles

error: