ಮೈಸೂರು

ಧೈರ್ಯವಿದ್ದರೆ ಏನನ್ನಾದರೂ ಸಾಧಿಸಬಹುದು: ಸಂವಾದದಲ್ಲಿ ನೀಲಮ್ಮ ಮನಸಿನ ಮಾತು

ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಆರ್ಟ್  ಗ್ಯಾಲರಿಯಲ್ಲಿ ಶನಿವಾರ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಾಧಕರೊಂದಿಗೆ ಸಂವಾದ-13ರಲ್ಲಿ ಈ ತಿಂಗಳ ಸಾಧಕರಾಗಿ ನೀಲಮ್ಮ ತಮ್ಮ ಅನುಭವವನ್ನು ಹಂಚಿಕೊಂಡರು. ಯೌವ್ವನದಲ್ಲಿ ಹಲವು ಕನಸುಗಳನ್ನು ಹೊತ್ತು ಬಂದ ನನಗೆ ಪತಿಯೊಂದಿಗೆ ರುದ್ರಭೂಮಿಯಲ್ಲಿ ಕೆಲಸ ನಿರ್ವಹಿಸಬೇಕಾಗಬಹುದು ಎನ್ನುವ ಕಲ್ಪನೆ ಇರಲಿಲ್ಲ ಎಂದು ತಾನು  ನಡೆದು ಬಂದ ಹಾದಿಯನ್ನು ನೆನಪಿಸಿಕೊಂಡರು. ಧೈರ್ಯವೊಂದಿದ್ದರೆ ಬದುಕಿನಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತಿಳಿಸಿದರು.

ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ನಗರ ಪಾಲಿಕೆ ಸದಸ್ಯ ಎಂ.ಸುನಿಲ್‍ಕುಮಾರ್ ಅತಿಥಿಯಾಗಿ ಪಾಲ್ಗೊಂಡಿದ್ದರು. ವಿಶೇಷ ಅತಿಥಿಗಳಾಗಿ ಅಂಬಳೆ ಶಿವಾನಂದಸ್ವಾಮಿ, ಎಂ.ಶಿವಕುಮಾರಸ್ವಾಮಿ, ರೋಟರಿ ಮೈಸೂರು ಉತ್ತರದ ಗೌರವ ಕಾರ್ಯದರ್ಶಿ ಎಂ.ರಾಜು, ಎಲ್.ಮಹದೇವಪ್ಪ ಉಡಿಗಾಲ ಹಾಜರಿದ್ದರು. ಮೈಸೂರು ಆರ್ಟ್ ಗ್ಯಾಲರಿಯ ಅಧ್ಯಕ್ಷ ಎಲ್.ಶಿವಲಿಂಗಪ್ಪ, ಕಾರ್ಯದರ್ಶಿ ಡಾ.ಜಮುನಾರಾಣಿ ಮಿರ್ಲೆ, ಖಜಾಂಚಿ ಪ್ರಭಾ ಶಿವಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: