ಮೈಸೂರು

ಮೈಸೂರು ಪುರ ಪ್ರವೇಶಗೈದ ಶೃಂಗೇರಿ ಶ್ರೀಗಳು

40 ವರ್ಷದ ನಂತರ ಶೃಂಗೇರಿ ಶಂಕರ ಮಠದ ಭಾರತೀ ತೀರ್ಥ ಸ್ವಾಮೀಜಿ ಮತ್ತು ಕಿರಿಯ ಶ್ರೀಗಳು  ಶನಿವಾರ  ಸಂಜೆ ಮೈಸೂರು ಪುರ ಪ್ರವೇಶಗೈದಿದ್ದು, ಮೇಯರ್ ಎಂ.ಜೆ. ರವಿಕುಮಾರ್, ಶಂಕರಮಠದ ಧರ್ಮಾಧಿಕಾರಿ ರಾಮಚಂದ್ರ ಮತ್ತು ವಿಪ್ರ ಮುಖಂಡರು ಸ್ವಾಗತಿಸಿದರು.

ಮಾ.13ರ ವರೆಗೆ ನಗರದ ಶಂಕರಮಠದಲ್ಲಿ  ಶ್ರೀಗಳು ವಾಸ್ತವ್ಯ ಹೂಡಲಿದ್ದು, ಮಾ.12ರ ಬೆಳಿಗ್ಗೆ 9.30ರಿಂದ ಭಕ್ತಾದಿಗಳಿಗೆ ಧರ್ಮದರ್ಶನ ಮತ್ತು ಫಲಮಂತ್ರಾಕ್ಷತೆ ನೀಡಲಿದ್ದಾರೆ. ಸಂಜೆ 5.30ಕ್ಕೆ ಗುರುವಂದನೆ ಏರ್ಪಡಿಸಲಾಗಿದ್ದು, ಯದುವಂಶಸ್ಥ ಯದುವೀರ್ ಕೃಷ್ಣದತ್ತ  ಚಾಮರಾಜ ಒಡೆಯರ್ ಭಾಗವಹಿಸಲಿದ್ದಾರೆ. ರಾತ್ರಿ 8.30ಕ್ಕೆ ಚಂದ್ರಮೌಳೇಶ್ವರ ಪೂಜೆ ನೆರವೇರಿಸಲಿದ್ದು, ಮಾ. 13ರ ಬೆಳಿಗ್ಗೆ 9.30ರಿಂದ 12.30ರ ವರೆಗೆ ಧರ್ಮದರ್ಶನ ಮತ್ತು ಫಲಮಂತ್ರಾಕ್ಷತೆ ವಿತರಿಸುವರು, ನಂತರ ಸಂಜೆ 5.30 ಕ್ಕೆ ಹೆಬ್ಬೂರಿಗೆ ತೆರಳಲಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: