ಮೈಸೂರು

ಅಪರಾಧಿಗಳ ಪತ್ತೆಗೆ ಹಾಗೂ ನಿಯಂತ್ರಣಕ್ಕೆ ಸಿಸಿ ಟಿವಿ ಕ್ಯಾಮರ ಅನಿವಾರ್ಯ : ಪೊಲೀಸ್ ಕಮಿಷನರ್ ಬಿ.ದಯಾನಂದ್

ಸಾರ್ವಜನಿಕ ವಲಯದಲ್ಲಿ ಅಪರಾಧಿಗಳ ಪತ್ತೆಗೆ ಹಾಗೂ ಅಪರಾಧ ನಿಯಂತ್ರಣಕ್ಕೆ ಸಿಸಿ ಟಿವಿ ಆಧುನಿಕ ಯುಗದ ಅನಿವಾರ್ಯತೆಯಾಗಿದೆ ಎಂದು ಮೈಸೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ತಿಳಿಸಿದರು.

ಅವರು ನಗರದ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೆ.27ರ ಮಂಗಳವಾರದಂದು ಸಿಸಿ.ಟಿವಿ ಕ್ಯಾಮರಾಗೆ ಚಾಲನೆ ನೀಡಿ ಮಾತನಾಡಿ ಹಿಂದೆ ಸಮಾಜದಲ್ಲಿ ಸುರಕ್ಷತೆ ಹಾಗೂ ಪರಸ್ಪರರಲ್ಲಿ ಸೌಹಾರ್ದವಿತ್ತು, ಸಮಯಕ್ಕೆ ಅನುಗುಣವಾಗಿ ಬದಲಾವಣೆ ಅನಿರ್ವಾಯವಾಗಿದ್ದು ಮೈಸೂರು ದಿನೇ ದಿನೇ ವಿಸ್ತಾರಗೊಳ್ಳುತ್ತಾ ಜಾಗತಿಕ ತಾಣವಾಗಿದೆ. ಅದರಂತೆ ಅಪರಾಧ ಸಂಖ್ಯೆಗಳು ಹೆಚ್ಚುತ್ತಿವೆ,  ಸಾರ್ವಜನಿಕ ವಲಯದಲ್ಲಿ ಆದ ಅವಘಡಗಳಿಗೆ ತಕ್ಷಣ ಮೊರೆ ಹೋಗುವುದು ಸಿಸಿ ಟಿವಿ ಕ್ಯಾಮರಾಗೆ,  ಎಷ್ಟೋ ಅಪರಾಧಗಳು ಇದರಿಂದಲೇ ಬೆಳಕಿಗೆ ಬಂದು ಪರಿಹಾರ ಕಂಡಿವೆ. ವಿಧ್ವಂಸಕ ಕೃತ್ಯವೆಸಗಲು ಅಪರಾಧಿಗಳು ಸಿಸಿ ಕ್ಯಾಮರಾ ಇಲ್ಲದ ಸ್ಥಳಗಳನ್ನೇ ಹುಡುಕುವರು, ಈಚೆಗೆ ಕೋರ್ಟಿನ ಎದುರು ಭಾಗದಲ್ಲಿ ನಡೆದ ಬಾಂಬ್ ಸ್ಪೋಟಕ್ಕೆ ಈ ಹಿನ್ನಲೆಯಲ್ಲಿ  ವಿಧ್ವಂಸಕರು ಬಳಸಿಕೊಂಡಿದ್ದರು. ಆದ್ದರಿಂದ ನಿಮ್ಮ ಹಾಗೂ ಪರಿಸರದ ಸುರಕ್ಷತೆಗೆ ಸಿಸಿ ಟಿವಿ ಕ್ಯಾಮರಾವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಿ, ಈಗಾಗಲೇ ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ವ್ಯಾಪಾರಿ ವಲಯದಲ್ಲಿ ಸಿಸಿ ಟಿವಿ ಕ್ಯಾಮರಾವನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವುದು ಎಂದು ತಿಳಿಸಿ. ಪತ್ರಕರ್ತರು ರಸ್ತೆ ಸುರಕ್ಷತೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದಾಗ ಭವನಲ್ಲಿ ಒಂದು ಕ್ಷಣ ಹಾಸ್ಯದ ವಾತಾವರಣ ಉಂಟಾಯಿತು.

ಕಳೆದು ಹದಿನೈದು ವರ್ಷದ ಹಿಂದೆ ಪತ್ರಿಕಾ ಕಚೇರಿಗೆ ಸಿಸಿ ಕ್ಯಾಮರಾ ಅಳವಡಿಕೆ ಗುಲಾಮಗಿರಿಯ ಸಂಕೇತವೆಂದು ಭಾವಿಸಿ ವಿರೋಧಿಸಿದ್ದೆ, ಪ್ರಸ್ತುತ ಮೈಸೂರಿನಲ್ಲಿ 350ಕ್ಕೂ ಹೆಚ್ಚು ಪತ್ರಕರ್ತರಿದ್ದು, ಭವನದಲ್ಲಿ ದಿನಕ್ಕೆ ಹಲವಾರು ಸುದ್ಧಿಗೋಷ್ಠಿಗಳು ಜರುಗುವುದರಿಂದ ಇದೊಂದು ಸಾರ್ವಜನಿಕ ಸ್ಥಳವಾಗಿ ಮಾರ್ಪಟ್ಟಿದೆ. ಪತ್ರಕರ್ತರು ದುಬಾರಿ ಕ್ಯಾಮರಾ ಹಾಗೂ ಇತರೆ ಉಪಕರಣಗಳನ್ನು ಭವನದಲ್ಲಿಯೇ ಇಡುವರು, ಅವುಗಳ ಹಾಗೂ ಸಮಗ್ರ ಸುರಕ್ಷತಾ ದೃಷ್ಠಿಯಿಂದ ಸಿಸಿ ಕ್ಯಾಮರಾ ಅಳವಡಿಕ್ಕೆ ಅನಿವಾರ್ಯವಾಗಿತ್ತು, ದಾನಿಗಳ ಸಹಯೋಗದಿಂದ ಭವನದಲ್ಲಿ ನಾಲ್ಕು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಮೈಸೂರು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಸಿ.ಕೆ.ಮಂಜುನಾಥ್, ಉಪಾಧ್ಯಕ್ಷ ರವಿಕುಮಾರ್, ಗ್ರಾಮಾಂತರ ವಿಭಾಗದ ಉಪಾಧ್ಯಕ್ಷ ಮಹೇಂದ್ರ ಟ್ರಾಪಿಕ್ ಇನ್ಸಪೆಕ್ಟರ್ ಪ್ರಕಾಶ್ ಹಾಗೂ ಇತರರು ಹಾಜರಿದ್ದರು.

Leave a Reply

comments

Tags

Related Articles

error: