ಪ್ರಮುಖ ಸುದ್ದಿ

ಎಸ್‍ಎಫ್‍ಸಿ ವಿಶೇಷ ಅನುದಾನ : ಮಡಿಕೇರಿ ನಗರದಲ್ಲಿ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ : ಯೋಜನಾ ನಿರ್ದೇಶಕ ಶ್ರೀನಿವಾಸ್

ರಾಜ್ಯ( ಮಡಿಕೇರಿ) ಫೆ.12:- 2019-20ನೇ ಸಾಲಿನಲ್ಲಿ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಎಸ್‍ಎಫ್‍ಸಿ ವಿಶೇಷ ಅನುದಾನ ಕ್ರಿಯಾಯೋಜನೆಗೆ ಮಂಜೂರಾತಿ ದೊರೆತಿದ್ದು, ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶ್ರೀನಿವಾಸ್ ಅವರು ಮಾಹಿತಿ ನೀಡಿದ್ದಾರೆ.
ಮಡಿಕೇರಿ ನಗರಸಭಾ ಕಾವೇರಿ ಕಲಾಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ ರೂ 100 ಲಕ್ಷ, ಕನ್ನಿಕಾ ಲೇಔಟ್ ಒಳಬಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ರೂ 33 ಲಕ್ಷ, ವಿದ್ಯಾನಗರದಲ್ಲಿ ಗಣೇಶ್‍ರವರ ಮನೆ ಹಿಂಬಾಗ ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿಗೆ ರೂ 25 ಲಕ್ಷ, ಜಾನ್ ಲೇಔಟ್ ಒಳಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ 20 ಲಕ್ಷ, ಭಗವತಿ ವರ್ಕ್ ಶಾಪ್‍ನಿಂದ- ಕಾನ್ವೆಂಟ್ ಗೊಂಬೆ ಮನೆಯಿಂದ- ಅಭಿಪಾಲ್ಸ್ ಜಂಕ್ಷನ್‍ವರೆಗೆ ಹಗೂ ಕೂರ್ಗ್ ಇಂಟರ್‍ನ್ಯಾಷನಲ್ ಹೋಟೆಲ್ ಜಂಕ್ಷನ್‍ನಿಂದ-ಅರುಣ್ ಶೆಟ್ಟಿ ಮನೆಗೆ ಹೋಗುವ ರಸ್ತೆ-ಪಿ.ಡಬ್ಲ್ಯೂಡಿ ವಸತಿಗೃಹ ಮುಂಭಾಗದಿಂದ-ಕಾಲೇಜ್ ರಸ್ತೆ ಸೇರುವರೆಗೆ ರಸ್ತೆ ಅಬಿವೃದ್ಧಿ ಕಾಮಗಾರಿಗೆ ರೂ 20 ಲಕ್ಷ, ಸುಬ್ರಮಣ್ಯನಗರ ಒಳಭಾಗದ ರಸ್ತೆಯ ಅಬಿವೃದ್ಧಿ ಕಾಮಗಾರಿಗೆ ರೂ. 20 ಲಕ್ಷ, ಚಾಮುಂಡೇಶ್ವರಿ ನಗರದ ಸಮುದಾಯ ಭವನದ ಹತ್ತಿರ, ಆಕಾಶವಾಣಿ ಕ್ವಾಟ್ರಸ್ ಹಿಂಭಾಗದ ರಸ್ತೆ ಅಭಿವೃದ್ಧಿ ಮತ್ತು ಆಯ್ದ ಭಾಗಗಳಲ್ಲಿ ಹೊಸ ರಸ್ತೆ ಹಾಗೂ ಜಡ್ಜ್ ಕ್ವಾಟ್ರರ್ಸ್ ಮುಂಭಾಗದಿಂದ-ಜ್ಯೋತಿನಗರ-ಫಿಲ್ಟರ್ಸ್ ಹೌಸ್ ಸೇರುವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ 15 ಲಕ್ಷ, ವಾರ್ಡ್ 01 ರಿಂದ ವಾರ್ಡ್ 23 ರ ವರೆಗೆ ಅವಶ್ಯವಿರುವ ಸ್ಥಳಗಳಲ್ಲಿ ಬೀದಿದೀಪಗಳನ್ನು ಖರೀದಿಸಿ ಅಳವಡಿಸಿರುವುದುಕ್ಕೆ ರೂ. 15 ಲಕ್ಷ, ಲೀವಾ ಕ್ಲೀನಿಕ್ ನಿಂದ ಮೈತ್ರಿ ಹಾಲ್‍ವರೆಗೆ ಮತ್ತು ಕಾಲೇಜು ರಸ್ತೆ ಎಸ್.ಬಿ.ಐ ನಿಂದ ವಿಜಯ ವಿನಾಯಕ ದೇವಾಲಯದವರೆಗೆ ಮತ್ತು ಇಂದಿರಾ ಕ್ಯಾಂಟಿನ್‍ನಿಂದ ಕಾವೇರಿ ಹಾಲ್ ರಸ್ತೆಯಲ್ಲಿ ಬೀದಿ ದೀಪ ವ್ಯವಸ್ಥೆ ಕಲ್ಪಿಸುವ ಕಾಮಗಾರಿಗೆ ರೂ.20 ಲಕ್ಷ, ಎಸ್.ಪಿ ಭಂಗಲೆ ಹಿಂಭಾಗದಿಂದ ತುಳಸಿಯವರ ಮನೆ ಸೇರುವವರೆಗೆ ರಸ್ತೆ ಮರು ಡಾಂಬರೀಕರಣ ಕಾಮಗಾರಿ ಮತ್ತು ಪ್ರಸನ್ನ ಗಣಪತಿ ದೇವಾಲಯದ ಒಳಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ 15 ಲಕ್ಷ, ಮಠದ ರಸ್ತೆಯ ಲೇಔಟ್‍ಗಳಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ 15 ಲಕ್ಷ, ಕುಮಾರ ವಿಲಾಸದಿಂದ-ದಿವಂಗತ ಲಿಂಗಪ್ಪ ಮನೆಯವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮತ್ತು ಹಳೇ ಇಂಡಿಯನ್ ಗ್ಯಾಸ್‍ನಿಂದ-ಮೊಣ್ಣಪ್ಪ ಗ್ಯಾರೇಜ್ ಸೇರುವವರೆಗೆ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ರೂ 15 ಲಕ್ಷ, ಸಂಪಿಗೆಕಟ್ಟೆಯಿಂದ ಕರಗ ಮಂಟಪಕ್ಕೆ ಹೋಗುವ ರಸ್ತೆಯ ಆಯ್ದ ಭಾಗಗಳಲ್ಲಿ ಅಭಿವೃದ್ದಿ ಕಾಮಗಾರಿಗೆ ರೂ 15 ಲಕ್ಷ, ಸಬ್ ರಿಜಿಸ್ಟ್ರರ್ ಕಚೇರಿ ಮುಂಭಾಗದಿಂದ-ಲೀಕೂರ್ಗ್ ಹೋಟೆಲ್ ಹಿಂಭಾಗದಿಂದ-ಕಂಚಿ ಕಾಮಾಕ್ಷಿ ದೇವಾಲಯದಿಂದ-ನಗರಸಭಾ ಕಚೇರಿ ಹತ್ತಿರದ ಪಾರ್ಕ್ ಸೇರುವವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ 10 ಲಕ್ಷ, ನಿಸರ್ಗ ಲೇಔಟ್‍ನಲ್ಲಿ ಭಾರದ್ವಜ್ ಮನೆಯಿಂದ ಸೋಮಣ್ಣನ ಮನೆಯವರೆಗೆ ಚರಂಡಿ ನಿರ್ಮಾಣ ಕಾಮಗಾರಿಗೆ ರೂ 10 ಲಕ್ಷ, ಚೈನ್‍ಗೇಟ್‍ನಿಂದ ತುಳಸಿ ಭವನದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ 5 ಲಕ್ಷ, ಭಗವತಿ ವರ್ಕ್ ಶಾಪ್ ಜಂಕ್ಷನ್‍ನಿಂದ ಐ.ಟಿ.ಐ ರಸ್ತೆ ಸೇರುವವರೆಗೆ ರಸ್ತೆಯ ಅಭಿವೃದ್ದಿ ಕಾಮಗಾರಿಗೆ ರೂ. 5 ಲಕ್ಷ, ವಿಜಯ ವಿನಾಯಕ ದೇವಸ್ಥಾನದಿಂದ ಆರ್ಮಿ ಕ್ಯಾಂಟೀನ್ ಸೇರುವವರೆಗೆ ಮತ್ತು ಕುಂದುರುಮೊಟ್ಟೆ ದೇವಸ್ಥಾನ ಲೀವಾ ಕ್ಲೀನಿಕ್ ಸೇರುವವರೆಗೆ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ರೂ 5 ಲಕ್ಷ, ಹರಿಹರ ಸರ್ವಿಸ್ ಸ್ಟೇಷನ್‍ನಿಂದ -ಚಮರಾಜ ಭಂಗಲೆ-ಚೈನ್‍ಗೇಟ್ ಸೇರುವವರೆಗೆ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ರೂ 5 ಲಕ್ಷ,
ಕನ್ನಂಡಬಾಣೆ ಪಂಪ್ ಹೌಸ್‍ಗೆ ಫ್ರಜರ್ ಫಿಲ್ಟರ್ ಮತ್ತು ಕ್ಲೋರಿನೇಷನ್ ಪ್ಲಾಂಟ್ ಅಳವಡಿಸಿ ಕುಡಿಯುವ ನೀರಿನ ಸೌಲಭ್ಯ ಕಾಮಗಾರಿಗೆ ರೂ 13.50 ಲಕ್ಷ, ರೋಷನಾರ ಪಂಪ್‍ಹೌಸ್‍ಗೆ ಫ್ರಜರ್ ಪಿಲ್ಟರ್ ಮತ್ತು ಕ್ಲೋರಿನೇಷನ್ ಪ್ಲಾಂಟ್ ಅಳವಡಿಸಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಕಾಮಗಾರಿಗೆ ರೂ 13.50 ಲಕ್ಷ, ಮಂಗಳೂರು ರಸ್ತೆಯಲ್ಲಿ ಕೊರೆಸಲಾದ ಬೋರ್‍ವೆಲ್‍ಗೆ 25 ಕೆ.ವಿ.ಎ ವಿದ್ಯುತ್ ಪರಿವರ್ತನೆ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವುದು ಹಾಗೂ ಕುಶಾಲಪ್ಪರವರ ಮನೆಯ ಹತ್ತಿರ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವುದಕ್ಕೆ ರೂ 5 ಲಕ್ಷ. ಒಟ್ಟು ಕಾಮಗಾರಿಗಳ ಮೊತ್ತ ರೂ.400 ಲಕ್ಷ ಮಂಜೂರಾಗಿದ್ದು, ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: