ಮೈಸೂರು

ಈಜಲು ತೆರಳಿದ ವಿದ್ಯಾರ್ಥಿ ಸಾವು

ಈಜಾಡಲೆಂದು  ಕಪಿಲಾನದಿಗೆ ಇಳಿದಿದ್ದ ವಿದ್ಯಾರ್ಥಿಯೋರ್ವ  ಸಾವನ್ನಪ್ಪಿದ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ಮೃತನನ್ನು  ಪೊಲೀಸ್ ಪೇದೆ ಮಹೇಶ್ ರ ಪುತ್ರ ರವಿಕುಮಾರ್ (13) ಎಂದು ಗುರುತಿಸಲಾಗಿದೆ. ನಂಜನಗೂಡಿನ ಕಪಿಲಾನದಿಯ ಹೊಸ ಸೇತುವೆ ಬಳಿ  ಈ ದುರ್ಘಟನೆ ಸಂಭವಿಸಿದೆ.
ನಂಜನಗೂಡಿನ ಸಿಟಿಜನ್ ಶಾಲೆಯ ವಿದ್ಯಾರ್ಥಿಯಾಗಿದ್ದು,ಶನಿವಾರ  ಪರೀಕ್ಷೆ ಮುಗಿದನಂತರ ಸ್ನೇಹಿತರೊಂದಿದೆ ಈಜಾಡಲು ತೆರಳಿದ್ದ ಎನ್ನಲಾಗಿದೆ.
ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: