ಕ್ರೀಡೆ

ಅಂತರರಾಷ್ಟ್ರೀಯ ಟಿ 20 ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಸುಳಿವು ನೀಡಿದ ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್

ದೇಶ(ನವದೆಹಲಿ)ಫೆ.12:- ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಸತತ ಎರಡು ವಿಶ್ವಕಪ್‌ಗಳ ನಂತರ ಕ್ರಿಕೆಟ್‌ನ ಕಡಿಮೆ ಸ್ವರೂಪದ ಟಿ 20 ಯಿಂದ ನಿವೃತ್ತಿ ಹೊಂದುವ ಬಗ್ಗೆ ಯೋಚಿಸುತ್ತಿದ್ದಾರೆ. ಟಿ 20 ವಿಶ್ವಕಪ್ ಈ ವರ್ಷ ಆಸ್ಟ್ರೇಲಿಯಾದಲ್ಲಿ ಮತ್ತು ಮುಂದಿನ ವರ್ಷ ಭಾರತದಲ್ಲಿ ನಡೆಯಲಿದೆ. “ನೀವು ಟಿ 20 ಇಂಟರ್ನ್ಯಾಷನಲ್ ಪಂದ್ಯದ ಕುರಿತು ಮಾತನಾಡಿದರೆ, ನಾವು ಸತತವಾಗಿ ಎರಡು ವಿಶ್ವಕಪ್ ಗಳನ್ನು ಆಡಬೇಕಾಗಿದೆ. ಇದು ಮುಂಬರುವ ಕೆಲವು ವರ್ಷಗಳಲ್ಲಿ ನಾನು ಬಿಟ್ಟುಕೊಡಬಹುದಾದ ಒಂದು ಸ್ವರೂಪವಾಗಿದೆ” ಎಂದಿದ್ದಾರೆ.

“ನಾನು ಶೆಡ್ಯೂಲ್ ಕುರಿತು ಗಮನಹರಿಸಬೇಕಾಗಿದೆ. ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಲು ನನಗೆ ಕಷ್ಟವಾಗುತ್ತದೆ. ಎಲ್ಲಾ ಮೂರು ಸ್ವರೂಪಗಳಲ್ಲಿ ಆಟವಾಡುವುದನ್ನು ಮುಂದುವರಿಸುವ ಎಲ್ಲರಿಗೂ ಶುಭವಾಗಲಿ. ನೀವು ಎಬಿ ಡಿವಿಲಿಯರ್ಸ್ ಮತ್ತು ವೀರೇಂದ್ರ ಸೆಹ್ವಾಗ್ ಅವರಂತಹ ಆಟಗಾರರೊಂದಿಗೆ ಮಾತನಾಡಿರುತ್ತೀರಿ,  ಯಾರು ಇದನ್ನು ಬಹಳ ಸಮಯದಿಂದ ಮಾಡಿದ್ದಾರೋ ಅವರಿಗೆ ಇದು ತುಂಬಾ ಕಷ್ಟಕರವಾಗುತ್ತದೆ.  ನನಗೆ ಮೂವರು ಮಕ್ಕಳು ಮತ್ತು ಹೆಂಡತಿ ಇದ್ದಾರೆ.  ಅಂತಹುದರಲ್ಲಿ ನಿರಂತರವಾಗಿ ಪ್ರವಾಸ ಮಾಡುವುದು ಕಷ್ಟಕರವಾಗಿದೆ. ನಾನು ಒಂದು ಸ್ವರೂಪವನ್ನು ಬಿಡಲು ನಿರ್ಧರಿಸಿದಲ್ಲಿ, ನಾನು ಬಹುಶಃ ಅಂತರರಾಷ್ಟ್ರೀಯ ಟಿ 20 ಕ್ರಿಕೆಟ್‌ನಿಂದ ಹೊರಗುಳಿಯುತ್ತೇನೆ” ಎಂದು ವಾರ್ನರ್ ತಿಳಿಸಿದ್ದಾರೆ.

ಡೇವಿಡ್ ವಾರ್ನರ್ ಇದುವರೆಗೆ ಆಸ್ಟ್ರೇಲಿಯಾ ಪರ 76 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 2079 ರನ್ ಗಳಿಸಿದ್ದಾರೆ. ಇದು ಒಂದು ಶತಕ ಮತ್ತು 15 ಅರ್ಧಶತಕಗಳನ್ನು ಒಳಗೊಂಡಿದೆ. ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ನಿಂದ ಏಕೆ ವಿರಾಮ ತೆಗೆದುಕೊಂಡರು ಎಂಬುದನ್ನು ವಾರ್ನರ್ ವಿವರಿಸಿದ್ದು. “ನಾನು ಯಾವುದೇ ಬಿಬಿಎಲ್ ತಂಡವನ್ನು ಹೊಂದಿಲ್ಲ, ಈ ಸಮಯದಲ್ಲಿ ನಾನು ವಿರಾಮ ತೆಗೆದುಕೊಂಡೆ. ನನ್ನ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿಯ ಅವಶ್ಯಕತೆಯಿತ್ತು. ಮುಂದಿನ ಸರಣಿಗೆ ನಾನು ತಯಾರಾಗುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ. (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: