ಮನರಂಜನೆ

ಪುಟ್ಟ ಅಭಿಮಾನಿಯನ್ನು ಭೇಟಿಯಾಗಿ ಆಸ್ಪತ್ರೆಯ ಸಂಪೂರ್ಣ ಖರ್ಚು ಭರಿಸಿದ ಪುನೀತ್ ರಾಜ್ ಕುಮಾರ್

ಬೆಂಗಳೂರು,ಫೆ.12-ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಪುಟ್ಟ ಅಭಿಮಾನಿಯ ಆಸೆಯನ್ನು ಈಡೇರಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಇಂದಿರ ನಗರದ ನಿವಾಸಿ ಹನುಮಂತ ಮತ್ತು ರೇಖಾ ದಂಪತಿಯ ಹಿರಿಯ ಪುತ್ರ ಬಾಲಕ ಆದರ್ಶ್ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಬಾಲಕನಿಗೆ ಪುನೀತ್ ರಾಜ್ ಕುಮಾರ್ ಅಂದರೆ ಇಷ್ಟ. ಅವರನ್ನು ಒಮ್ಮೆಯಾದರೂ ಭೇಟಿಯಾಗಬೇಕೆಂಬ ಆಸೆಯಿತ್ತು.

ಈ ವಿಚಾರ ತಿಳಿದ ಪುನೀತ್ ರಾಜ್ ಕುಮಾರ್ ಬಾಲಕನನ್ನು ಭೇಟಿಯಾಗಿದ್ದಾರೆ. ಬಳ್ಳಾರಿಯಿಂದ ಬಾಲಕ ಹಾಗೂ ಕುಟುಂಬದವರನ್ನು ಬೆಂಗಳೂರಿನ ತಮ್ಮ ಮನೆಗೆ ಕರೆಸಿಕೊಂಡು ಭೇಟಿಯಾಗಿದ್ದಾರೆ. ಪ್ರೀತಿಯಿಂದ ಮಾತನಾಡಿಸಿದ್ದಾರೆ. ಕೆಲವು ಸಮಯ ಅವರ ಜೊತೆ ಕಳೆದಿದ್ದಾರೆ. ನೆಚ್ಚಿನ ನಟನನ್ನು ಭೇಟಿಯಾದ ಸಂತಸ ಬಾಲಕನ ಮುಖದಲ್ಲಿ ಎದ್ದು ಕಾಣುತ್ತಿತ್ತು. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪುನೀತ್ ರಾಜ್ ಕುಮಾರ್ ಬಾಲಕ ಆದರ್ಶ್ ನ ಆಸ್ಪತ್ರೆಯ ಸಂಪೂರ್ಣ ಖರ್ಚನ್ನು ಭರಿಸಿದ್ದಾರೆ. ಪುಟ್ಟ ಅಭಿಮಾನಿ ಆದರ್ಶ್ ಬೇಗ ಚೇತರಿಕೊಳ್ಳಲಿ, ಆರೋಗ್ಯವಂತನಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: