ಮೈಸೂರು

ಏಷ್ಯಾ ಮಾಡೆಲ್ ಸ್ಪರ್ಧೆ : ಮೈಸೂರಿನ ರೈತನ ಪುತ್ರನಿಗೆ ಕಿರೀಟ

ಮೈಸೂರು,ಫೆ.12:- ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ರೈತರ ಮಗನಾದ  ಇಂಟರ್ ನ್ಯಾಷನಲ್ ಮಾಡೆಲ್ ನಾಗೇಶ್ ಡಿ.ಸಿ.ಅವರು ಮಂಜರಿ ನೇಪಾಳ್ ಪ್ರೈ.ಲಿಮಿಟೆಡ್ ನವರು ಆಯೋಜಿಸಿದ್ದ ಮಿಸ್ಟರ್ ಏಷ್ಯಾ 2020ರಲ್ಲಿ ಮಿಸ್ಟರ್ ಏಷ್ಯಾ ಅಡ್ವಂಚರ್ 2020, ಮುರ್ ಏಷ್ಯಾ ಕಲ್ಚರ್ 2020 ಮತ್ತು ಮಿ.ಏಷ್ಯಾ ಸೌತ್ ಇಂಡಿಯಾದಲ್ಲಿ ವಿಜೇತರಾಗಿದ್ದಾರೆ.

ಸ್ಪರ್ಧೆಯು 31/01/2020ರಿಂದ 07/02/2020ರವರೆಗೆ ಹೋಟೆಲ್ ಸೆವೆನ್ ಸ್ಟಾರ್ ಚಿಟವಾನ್ ನಲ್ಲಿ ನಡೆದಿತ್ತು. ಇವರು ದೇವನೂರು ಗ್ರಾಮದ ರೈತ ಚಿನ್ನಬುದ್ಧಿ ಮತ್ತು ರೇಣುಕ ಅವರ ಸುಪುತ್ರ.  ವಿಜೇತರಾದ ಕುರಿತು ಮಾತನಾಡಿದ ನಾಗೇಶ್ ಡಿ.ಸಿ. ಈ ಸ್ಪರ್ಧೆಯಲ್ಲಿ ನಾನು ನಮ್ಮ ದೇಶದ ರೈತರ ವೇಷ ಭೂಷಣವನ್ನು ಧರಿಸಿ ಪ್ರತಿನಿಧಿಸಿದ್ದು ತುಂಬ ಸಂತೋಷದ ವಿಷಯ. ನಾನೂ ಕೂಡ ರೈತನ ಮಗನಾದ ಕಾರಣ ಇನ್ನು ಮುಂದೆಯೂ ಕೂಡ ಈ ಥೀಮ್ ನ್ನು ಫ್ಯಾಷನ್ ಇಂಡಸ್ಟ್ರೀಗೆ ತರಲು ಇಚ್ಛಿಸುತ್ತೇನೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: