ಮೈಸೂರು

ಫೆ.14 : ಶ್ರೀಧನ್ವಂತರಿ ದೇವರ ವಿಗ್ರಹದ ಭವ್ಯ ಮೆರವಣಿಗೆ

ಮೈಸೂರು,ಫೆ.12:- ಪೋರ್ಟ್ ಮೊಹಲ್ಲಾದಲ್ಲಿರುವ ಶ್ರೀ ಉತ್ತರಾದಿ ಮಠದ ವಿದ್ಯಮಾನ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸತ್ಯಾರ್ಥ ತೀರ್ಥ ಶ್ರೀಪಾಂದಗಳವರು ತಮ್ಮ ಗುರುಗಳಾದ ಶ್ರೀ ಸತ್ಯ ಪ್ರಮೋದ ತೀರ್ಥ ಶ್ರೀಪಾದಂಗಳವರ ಜನಮ್ ಶತಮಾನೋತ್ಸವದ ನೆನಪಿಗಾಗಿ ಬೃಹತ್ ಕಟ್ಟಡವನ್ನು ನಿರ್ಮಿಸಿದ್ದು, ಕಟ್ಟಡದಲ್ಲಿ 8ಅಡಿ ಎತ್ತರದ ಅಪರೂಪದ ಶ್ರೀಧನ್ವಂತರಿ ದೇವರ ವಿಗ್ರಹವನ್ನು ಕೆಲವೇ ತಿಂಗಳುಗಳಲ್ಲಿ ಸ್ಥಾಪಿಸಲಿದ್ದು, ಫೆ.14ರಂದು ಸಂಜೆ 4.30ಕ್ಕೆ ಮಹಾರಾಜ ಕಾಲೇಜು ಆವರಣದಿಂದ ಭವ್ಯ ಮೆರವಣಿಗೆ ಹೊರಡಲಿದೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉತ್ತರಾಧಿಮಠದ ವ್ಯವಸ್ಥಾಪಕ ಅನಿರುದ್ಧಾಚಾರ್ ಪಾಂಡುರಂಗಿ ಮಾತನಾಡಿ ಮೆರವಣಿಗೆಯು ಮಹಾರಾಜ ಕಾಲೇಜು ಮೈದಾನದಿಂದ ಆರಂಭವಾಗಿ ರಾಮಸ್ವಾಮಿ ವೃತ್ತದ ಮಾರ್ಗವಾಗಿ ಅಗ್ರಹಾರದ ಉತ್ತರಾದಿ ಮಠಕ್ಕೆ ಆಗಮಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ, ಡಿ.ಟಿ.ಪ್ರಕಾಶ್, ಯುವ ಮುಖಂಡ ವಿಕ್ರಂ ಅಯ್ಯಂಗಾರ್, ಕೆ.ಎಂ.ನಿಶಾಂತ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: