ಮೈಸೂರು

ಧರ್ಮದ ಕುರಿತು ಮಾತನಾಡಲು ಯಡಿಯೂರಪ್ಪ ಧರ್ಮಾಧಿಕಾರಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಬೆಳಿಗ್ಗೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಶ್ರೀಗಳ ಆಶಿರ್ವಾದ ಪಡೆದ ನಂತರ ಅವರೊಂದಿಗೆ ಉಭಯಕುಶಲೋಪರಿಯ ಜೊತೆ ಸಮಾಲೋಚನೆ ನಡೆಸಿದರು. ಈ ಸಂದರ್ಭ ನಂಜನಗೂಡು ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಕಳಲೆ ಕೇಶವಮೂರ್ತಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮುಖ್ಯಮಂತ್ರಿಗಳ ಜೊತೆಗಿದ್ದರು.

ಬಿಎಸ್ ಯಡಿಯೂರಪ್ಪನವರು ಅಧರ್ಮದ ಕುರಿತು ನೀಡಿದ ಹೇಳಿಕೆ ಕುರಿತಂತೆ ಮಾಧ್ಯಮಗಳೊಂದಿಗೆ  ಖಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಡಿಯೂರಪ್ಪ ಮಾಡಿದ ಪಾಪದ ಕೆಲಸ ಇನ್ನೊಂದು ಜನ್ಮ ತಾಳಿದರೂ ಕಳೆಯಲ್ಲ.ಅವರೇನು ಧರ್ಮಾಧಿಕಾರಿಯೇ ಎಂದು ಪ್ರಶ್ನಿಸಿದರು.

ಚುನಾವಣೆ ಸಂದರ್ಭ ಬಜೆಟ್ ಮಂಡಿಸುತ್ತಿದ್ದಾರೆ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಬಜೆಟ್ ವಿಷಯವಾಗಿ ಬಿಜೆಪಿ ತಕರಾರು ತೆಗೆಯುತ್ತಿದೆ. ಅದಕ್ಕೇನಾದರೂ ಕಾಮನ್‌ಸೆನ್ಸ್ ಇದೆಯಾ. 5 ರಾಜ್ಯಗಳ ಚುನಾವಣೆ ಇದ್ದಾಗ ಕೇಂದ್ರ ಸರ್ಕಾರ ಬಜೆಟ್ ಮಂಡಿಸಬಹುದು.ಉಪಚುನಾವಣೆ ಇದ್ದಾಗ ನಾವು ಬಜೆಟ್ ಮಂಡಿಸಬಾರದ ಎಂದು ಪ್ರಶ್ನಿಸಿದರು.

ಈ ಸಂದರ್ಭ ಕಾಂಗ್ರೆಸ್ ನ ಸ್ಥಳೀಯ ಶಾಸಕರು, ಕಾರ್ಯಕರ್ತರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: