ಮೈಸೂರು

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಗೇಂದ್ರ ಚಾಲನೆ

ಮೈಸೂರು,ಫೆ.13:- ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಚಾಲನೆ ನೀಡಿದರು.

ಹೆಬ್ಬಾಳ 1 ನೇ ವಾರ್ಡ್ ನ  ಕಾವೇರಿ ವೃತ್ತದ ಬಳಿ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ನಾಗೇಂದ್ರ ಸುಮಾರು 1 ಕೀ.ಮಿ ನಷ್ಟು ರಸ್ತೆ ಮರು ಡಾಂಬರೀಕರಣಕ್ಕೆ  ಚಾಲನೆ ನೀಡಿದರು. ಸುಮಾರು 40ಲಕ್ಷ ಅಂದಾಜು ವೆಚ್ಚದ ಕಾಮಗಾರಿ. ಇದಾಗಿದ್ದು, ಎಂ.ಎಲ್.ಎ.ವಿಶೇಷ ಅನುದಾನದಡಿ ಕಾಮಗಾರಿಗೆ ಚಾಲನೆ ನೀಡಿದರು. ಶಾಸಕರಿಗೆ   ಸ್ಥಳೀಯ ಪಾಲಿಕೆ‌ ಸದಸ್ಯೆ ಲಕ್ಷ್ಮಿ‌ಶಿವಣ್ಣ,ಪಾಲಿಕೆ ಇಂಜಿನಿಯರ್ ಮಹಾಂತ್ ಗೌಡ ಪಾಟೀಲ್, ವೀರೇಶ್, ಹೆಚ್.ನಾಗರಾಜ್ ವಲಯ ಅಧಿಕಾರ ಸೇರಿದಂತೆ ಸ್ಥಳೀಯ ಮುಖಂಡರು ಸಾಥ್ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: