ಮನರಂಜನೆ

ದಾಖಲೆ ಮೊತ್ತಕ್ಕೆ ಮಾರಾಟವಾಗಿದೆಯಂತೆ ಕೆಜಿಎಫ್-2 ಚಿತ್ರದ ತೆಲುಗು ವರ್ಷನ್

ರಾಜ್ಯ(ಬೆಂಗಳೂರು)ಫೆ.13:- ಕೆಜಿಎಫ್-2 ಚಿತ್ರದ ತೆಲುಗು ವರ್ಷನ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ ಎಂಬ ಸುದ್ದಿ ಹೊರ ಬಿದ್ದಿದೆ.

ಕನ್ನಡ ಸಿನಿಮಾವೊಂದು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ಇದೇ ಮೊದಲು. ಚಾಪ್ಟರ್-1 ಸಾಕಷ್ಟು ದಾಖಲೆಗಳನ್ನು ನಿರ್ಮಿಸಿತ್ತು. ಆದರೆ ಚಾಪ್ಟರ್-2 ಈ ಎಲ್ಲಾ ದಾಖಲೆಗಳನ್ನು ಮುರಿದಿದೆ.

ತೆಲುಗು ವರ್ಷನ್ ಬರೋಬ್ಬರಿ 40 ಕೋಟಿಗೆ ಸೇಲ್ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಕೆಜಿಎಫ್-2 ತೆಲುಗು ವರ್ಷನ್ ಗೆ 30 ಕೋಟಿ ಆಫರ್ ಬಂದಿತ್ತಂತೆ. ಆದರೆ ನಿರ್ಮಾಪಕರು 40ಕೋಟಿಗೂ ಕಮ್ಮಿ ಸೇಲ್ ಮಾಡುವುದಿಲ್ಲ ಎಂದು ಪಟ್ಟು ಹಿಡಿದು 40 ಕೋಟಿಗೆ ಮಾರಾಟ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: