ಕ್ರೀಡೆ

4 ತಿಂಗಳಲ್ಲಿ 26 ಕೆಜಿ ತೂಕ ಕಳೆದುಕೊಂಡ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ !

ದೇಶ(ನವದೆಹಲಿ)ಫೆ.13:- ಇತ್ತೀಚೆಗೆ ಟೆನ್ನಿಸ್ ಕೋರ್ಟ್ ಗೆ  ಮರಳಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ತಾಯಿಯಾದ ನಂತರ ನಾಲ್ಕು ತಿಂಗಳಲ್ಲಿ 26 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಸಾನಿಯಾ ತನ್ನ ಕೆಲವು ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ, ಅದರ ಮೂಲಕ ತನ್ನ ದೈಹಿಕ ಸ್ಥಿತಿ ಏನು ಮತ್ತು ಸುಮಾರು ಎರಡು ವರ್ಷಗಳ ಕಾಲ ಟೆನಿಸ್‌ನಿಂದ ದೂರವಾದ ನಂತರ ಈಗ ಏನಾಗಿದೆ ಎಂದು ಹೇಳಿಕೊಂಡಿದ್ದಾರೆ.

ಫೋಟೋವನ್ನು ಪೋಸ್ಟ್ ಮಾಡಿದ ಸಾನಿಯಾ, “89 ಕೆಜಿ ವರ್ಸಸ್ 63ಕೆಜಿ. ನಾವೆಲ್ಲರೂ ಒಂದು ಗುರಿಯನ್ನು ಹೊಂದಿದ್ದೇವೆ. ದೈನಂದಿನ ಗುರಿಗಳು ಮತ್ತು ದೀರ್ಘಾವಧಿಯ ಗುರಿಗಳು . ನಾವೆಲ್ಲರೂ ಇದಕ್ಕೆ ಹೆಮ್ಮೆ ಪಡಬೇಕು. ಮಗುವಾದ ನಂತರ ನಾನು ಆರೋಗ್ಯವಾಗಿರಲು,  ಫಿಟ್ ಆಗಲು 4 ತಿಂಗಳು ಕಾಲ ತೆಗೆದುಕೊಂಡಿತು. ಮತ್ತೆ  ಫಿಟ್‌ನೆಸ್ ಪಡೆಯಲು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಲು ಬಹಳ ಸಮಯ ತೆಗೆದುಕೊಂಡಿದೆ ಎಂದು ತೋರುತ್ತದೆ ಎಂದಿದ್ದಾರೆ. ನಿಮ್ಮ ಕನಸುಗಳನ್ನು ಬೆನ್ನಟ್ಟಿ. ನಿಮಗಿದು ಸಾಧ್ಯವಿಲ್ಲ ಎಂದು ಎಷ್ಟೋ ಜನರು ಹೇಳುತ್ತಾರೆ.  ಏಕೆಂದರೆ ನಮ್ಮ ಸುತ್ತ ಎಷ್ಟು ಮಂದಿ ಅಂತಹವರಿದ್ದರೋ ಅದು ಮೇಲಿದ್ದವನಿಗೆ ಮಾತ್ರ ತಿಳಿದಿದೆ. ನನಗೆ ಸಾಧ್ಯವಿದೆ ಅನ್ನೋ ವಿಶ್ವಾಸವಿದ್ದರೆ ಸಾಧಿಸಬಹುದು ಎಂದಿದ್ದಾರೆ.

ಸಾನಿಯಾ ಮಿರ್ಜಾ ಅವರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅವರ ಫೋಟೋದಲ್ಲಿ ಲೈಕ್ ಗಳು ಕಮೆಂಟ್ಸ್ ಗಳು ಹರಿದು ಬರುತ್ತಿದೆ.   ಜನರು ಪ್ರಶಂಸಿಸುತ್ತಿದ್ದಾರೆ. ಕೆಲವರು ತಮ್ಮ ಐಡಿಯಲ್ ಎಂದು ಹೆಳಿಕೊಳ್ಳುತ್ತಿದ್ದಾರೆ.

ತೂಕ ಇಳಿಸಿಕೊಳ್ಳಲು ಸಾನಿಯಾ ಕಠಿಣ ಶ್ರಮ ವಹಿಸಿದ್ದಾರೆ.   ತೂಕವನ್ನು ಕಳೆದುಕೊಳ್ಳುವ ದೃಢ ನಿಶ್ಚಯ ಹೊಂದಿದ್ದ ಅವರು   ತೂಕ ಇಳಿಸುವ ತಮ್ಮ ಪ್ರಯತ್ನವನ್ನು ಎಂದಿಗೂ ಬಿಡಲಿಲ್ಲ. ತನ್ನ ಕಟ್ಟುನಿಟ್ಟಾದ ತಾಲೀಮು ದಿನಚರಿಯೊಂದಿಗೆ, ಸಾನಿಯಾ ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ತೆಗೆದುಕೊಂಡರು. ಮೂರು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ವಿಜೇತ ಸಾನಿಯಾ, ಜನವರಿಯಲ್ಲಿ ನಡೆದ ಹೋಬಾರ್ಟ್ ಅಂತರರಾಷ್ಟ್ರೀಯ ಪಂದ್ಯಾವಳಿಯನ್ನು ಗೆದ್ದು ಇಂಟರ್ನ್ಯಾಷನಲ್ ಸರ್ಕ್ಯೂಟ್ಗೆ ಮರಳಿದರು. (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: