ಪ್ರಮುಖ ಸುದ್ದಿಮನರಂಜನೆ

‘ನೀ ಮಾಯೆಯೊಳಗೋ ಮಾಯೆ  ನಿನ್ನೋಳಗೋ’ ಕನ್ನಡ ಚಿತ್ರ ಶೂಟಿಂಗ್

ರಾಜ್ಯ(ಮಡಿಕೇರಿ)ಫೆ.14:-  ಸುಂಟಿಕೊಪ್ಪದ ವಿಕಾಸ ಜನಸೇವಾ ಟ್ರಸ್ಟ್‌ನ ಅನಾಥಶ್ರಮದಲ್ಲಿ ಮಿತ್ತೂರು ದರ್ಶನ್ ರಾಘವಯ್ಯನವರ
ಧ್ವನಿ ಸಿನಿ ಕ್ರಿಯೆಷನ್ ಪ್ರೋಡಕ್ಷನ್‌ರವರಿಂದ ‘ನೀ ಮಾಯೆಯೊಳಗೋ ಮಾಯೆ  ನಿನ್ನೋಳಗೋ’ ಎಂಬ ಕನ್ನಡ ಚಿತ್ರ ಶೂಟಿಂಗ್ ಇತ್ತೀಚೆಗೆ ಸೆಟ್ಟೇರಿತು.

ಅನಾಥ ಮಕ್ಕಳ ಜೀವನದ ಕಥಾ ಹಂದರವಿರುವ ಈ ಚಿತ್ರಕ್ಕೆ ಬೆಂಗಳೂರಿನ ಸುನೀಲ್ ನಿರ್ದೇಶನ ಮಾಡುತ್ತಿದ್ದು, ಸುಮಂತ್ ಕ್ಯಾಮರಾಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಕುಮುಖ ಚಲನಚಿತ್ರದ ನಾಯಕ ನಟ ಹಾಗೂ ನಿರ್ಮಾಪಕ ಕೊಡಗಿನ ಸಿದ್ದಾಪುರದ ಮಿತ್ತೂರು ದರ್ಶನ್ ರಾಘವಯ್ಯ
ಚಿತ್ರ ನಿರ್ಮಿಸುತ್ತಿದ್ದು, ನಾಯಕನಾಗಿ ನಟಿಸುತ್ತಿದ್ದಾರೆ. ಕೊಡಗಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ಸಾಗುತ್ತಿದೆ. ಚಿತ್ರದಲ್ಲಿ ಬಾಲನಟನಾಗಿ ಕೆಂಬಡತಂಡ ಚಿರಂತ್ ಪೂಣಚ್ಚ, ಬಾಲನಟಿಯಾಗಿ ಮೂರ್ನಾಡುವಿನ ಈರಮಂಡ ಕುಶಿ ಕಾವೇರಮ್ಮ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ತಂಡ ವಿಕಾಸ್ ಜನಸೇವಾ ಟ್ರಸ್ಟ್‌ನ ಅನಾಥಶ್ರಮದಲ್ಲಿ ನೊಂದ ಜೀವಗಳೊಂದಿಗೆ ಬೆರೆತು ಅವರಿಗೆ ಬೇಕಾದ ಅಗತ್ಯ ಸಮಾಗ್ರಿಗಳನ್ನು ಒದಗಿಸಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: