ಮೈಸೂರು

ಆಯ್ಕೆ ಮಾಡಿಕೊಂಡ ಹುದ್ದೆಯಲ್ಲಿ ಆತ್ಮವಿಶ್ವಾಸವಿದ್ದಾಗ ನಿಷ್ಠೆಯಿಂದ ಕಾರ್ಯನಿರ್ವಹಿಸಲು ಸಾಧ್ಯ : ಡಾ.ಗೌತಮ್ ಬ್ಯಾನರ್ಜಿ

ಯುಜಿಸಿ ಪ್ರಾಯೋಜಿತ ಜೀವವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನೇಮಕಾತಿಪೂರ್ವ ತರಬೇತಿ ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು  ಮೈಸೂರಿನ ಬಿಎನ್ ರಸ್ತೆಯಲ್ಲಿರುವ ಜೆಎಸ್‍ಎಸ್ ಕಾಲೇಜಿನ ಸ್ನಾತಕೋತ್ತರ ಜೈವಿಕತಂತ್ರಜ್ಞಾನ ಮತ್ತು ಜೀವರಸಾಯನಶಾಸ್ತ್ರ ವಿಭಾಗ ವತಿಯಿಂದ ಆಯೋಜಿಸಲಾಗಿತ್ತು

ಕಾರ್ಯಾಗಾರವನ್ನು ಸ್ಟ್ಯಾಟರ್ಜಿಕ್ ಸೈನ್ಸ್ ಗ್ರೂಪ್  ಹಿಂದೂಸ್ತಾನ್ ಯುನಿಲಿವರ್ ಲಿ., ರಿಸರ್ಚ್ ಸೆಂಟರ್ ನ  ಡಾ. ಗೌತಮ್ ಬ್ಯಾನರ್ಜಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಹುದ್ದೆಯ ಬಗ್ಗೆ ಆತ್ಮವಿಶ್ವಾಸ ಹೊಂದಿರಬೇಕು ಹಾಗಾದರೆ ಮಾತ್ರ ಅವರು ಹೆಚ್ಚು ನಿಷ್ಠೆಯಿಂದ ಶ್ರದ್ಧೆವಹಿಸಿ ಹುದ್ದೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ನಂತರ  ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ನೇಮಕಾತಿಗೆ ಸಂಬಂಧಿಸಿದ ಸಮಸ್ಯೆಗಳ  ಕುರಿತು  ಉತ್ತರಿಸಿದರು. ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ. ಸಾಂಬಶಿವಯ್ಯ ಮಾತನಾಡಿ ನೇಮಕಾತಿ ಪೂರ್ವ ತರಬೇತಿ ಕಾರ್ಯಾಗಾರವನ್ನು ಸಾರ್ವಜನಿಕ ಹಾಗೂ ಖಾಸಗಿ ಉದ್ಯಮಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದು ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ ಅಲ್ಲದೆ ಈ ತರಬೇತಿಯಿಂದ ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ಸಹ ಹೆಚ್ಚಿಸಿಕೊಳ್ಳಲು ನೆರವಾಗಲಿದೆ ಎಂದರು.

ಕಾರ್ಯಾಗಾರದಲ್ಲಿ 200ಕ್ಕೂ ಹೆಚ್ಚು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.   ಬೆಂಗಳೂರಿನ ಮಾನವಸಂಪನ್ಮೂಲ  ಕೆಂವೆಲ್ ಬಯೋಫಾರ್ಮ ಪ್ರೈವೇಟ್ ಲಿ  ಮುಖ್ಯಸ್ಥ  ರೊನಾಲ್ಡ್ ಮ್ಯಾಸೆರೆನ್ಹಸ್, ಕರ್ನಾಟಕ ಬಯೋಟೆಕ್ನಾಲಜಿ ಮತ್ತು ಮಾಹಿತಿ ತಂತ್ರಜ್ಞಾನದ ಸಂಯೋಜಕ  ಡಾ. ಬಾಲಸುಬ್ರಮಣ್ಯ  ಇವರು ವಿದ್ಯಾರ್ಥಿಗಳಿಗೆ ಪೂರ್ವನೇಮಕಾತಿಯ ಕುರಿತು ತರಬೇತಿ ನೀಡಿದರು.

ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ. ಮಹದೇವಪ್ಪ. ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಬಿ ವೈ ಸತೀಶ್ ಕುಮಾರ್, ಸ್ನಾತಕೋತ್ತರ ಜೀವರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ  ಡಾ. ಚೇತನ್ ಕುಮಾರ್ ಎಂ, ಉಪಸ್ಥಿತರಿದ್ದರು.  (ಎಸ್.ಎಚ್)

Leave a Reply

comments

Related Articles

error: