ಮನರಂಜನೆ

ಯಶ್-ರಾಧಿಕಾ ಪಂಡಿತ್ ಪ್ರೀತಿಗೆ 10 ವರ್ಷ: ಶುಭಕೋರಿದ ರಾಧಿಕಾ ಪಂಡಿತ್

ಬೆಂಗಳೂರು,ಫೆ.14-ನಟಿ ರಾಧಿಕಾ ಪಂಡಿತ್ ಪತಿ ಯಶ್ ಅವರೊಂದಿಗಿರುವ ಫೋಟೋಗಳನ್ನು ಹಂಚಿಕೊಂಡು ಪ್ರೇಮಿಗಳ ದಿನಾಚರಣೆಗೆ ಶುಭಕೋರಿದ್ದಾರೆ.

ಇನ್ ಸ್ಟಾಗ್ರಾಮ್ ನಲ್ಲಿ ಯಶ್ ಜೊತೆಗಿರುವ 8 ಫೋಟೋಗಳನ್ನು ಹಂಚಿಕೊಂಡು, ಇಂದು ನಮ್ಮ 10ನೇ ವರ್ಷದ ಪ್ರೇಮಿಗಳ ದಿನ. 8 ವರ್ಷದ ಫೋಟೋಗಳು ಇದಾಗಿದ್ದು, ಮೊದಲ ಹಾಗೂ ಎರಡನೇ ವರ್ಷದ ಫೋಟೋ ಪೋಸ್ಟ್ ಮಾಡಲು ಆಗಲಿಲ್ಲ. ಆದರೆ ಇದರಲ್ಲಿ ನನ್ನ ಫೇವರೇಟ್ ಫೋಟೋ ಯಾವುದು ಎಂದು ಹೇಳುವುದು ಕಷ್ಟವಾಗುವುದಿಲ್ಲ. ಐರಾಳ ಕೈ ಹಿಡಿದುಕೊಂಡು ನಿಂತಿರುವ ಫೋಟೋ ನನ್ನ ಫೇವರೇಟ್. ಪ್ರೇಮಿಗಳ ದಿನದ ಶುಭಾಶಯಗಳು ಎಂದು ಅವರು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಯಶ್ ಗೋವಾದ ಕಾರ್ಯಕ್ರಮವೊಂದರಲ್ಲಿ ಇವರಿಬ್ಬರ ಡೇಟಿಂಗ್ ಸ್ಪಾಟ್ ಬಗ್ಗೆ ಮಾತನಾಡಿದ್ದರು. ಇವರಿಬ್ಬರು ಮದುವೆಗೂ ಮುನ್ನ ಡೇಟಿಂಗ್ ಗಾಗಿ ಗೋವಾದಲ್ಲಿ ಭೇಟಿಯಾಗುತ್ತಿದ್ದರು.

ಯಶ್ ಹಾಗೂ ರಾಧಿಕಾ ಪಂಡಿತ್ ಪ್ರೀತಿಸಿ ಮದುವೆಯಾದವರು. 2016ರ ಡಿಸೆಂಬರ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು, ರಾಧಿಕಾ ಪಂಡಿತ್ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. (ಎಂ.ಎನ್)

Leave a Reply

comments

Related Articles

error: