ಮೈಸೂರು

ಪರಿವಾರ ಮತ್ತು ತಳವಾರ ಹೆಸರುಗಳನ್ನು ಪರಿಶಿಷ್ಟ ವರ್ಗದ ಪಟ್ಟಿಯಲ್ಲಿ ಸೇರಿಸಲು ಸಹಕರಿಸಿದ ಎಲ್ಲ ಮಹನೀಯರುಗಳಿಗೆ ಕೃತಜ್ಞತೆ ಅರ್ಪಿಸಿದ ಚಿಕ್ಕಣ್ಣ

ಮೈಸೂರು,ಫೆ.14:- ಪರಿವಾರ ಮತ್ತು ತಳವಾರ ಹೆಸರುಗಳನ್ನು ಪರಿಶಿಷ್ಟ ವರ್ಗದ ಪಟ್ಟಿಯಲ್ಲಿ ಸೇರಿಸಲು ಸಹಕರಿಸಿದ ಎಲ್ಲ ಮಹನೀಯರುಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಿಕ್ಕಣ್ಣ ಅರ್ಪಿಸಿದ್ದಾರೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿಗೆ ಭೇಟಿ ಕೊಟ್ಟಾಗ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರುಗಳು ಕೊಟ್ಟಿದ್ದ ವಾಗ್ದಾನದಂತೆ ಪರಿವಾರ-ತಳವಾರ ಪದಗಳನ್ನು ಪರಿಶಿಷ್ಟ ವರ್ಗದ ಪಟ್ಟಿಯಲ್ಲಿ ಸೇರಿಸಿದ್ದಾರೆ. ಯಡಿಯೂರಪ್ಪನವರು ಪರಿವಾರ-ತಳವಾರ ಎಂಬವರ ಕುಲಶಾಸ್ತ್ರೀಯ ಅಧ್ಯಯನಕ್ಕೆ 50ಲಕ್ಷರೂ.ಬಿಡುಗಡೆ ಮಾಡಿದರು. ನಮ್ಮ ಜನಾಂಗಕ್ಕೆ ಕೊಟ್ಟಿದ್ದ ವಾಗ್ದಾನದಂತೆ ಲೋಕಸಭೆಯಲ್ಲಿ ಬುಡಕಟ್ಟು ಮಂತ್ರಿಗಳಾದ ಅರ್ಜುನ್ ಮುಂಡಾರವರು ಮಸೂದೆ ಮಂಡಿಸುವಂತೆ ಶ್ರಮಿಸಿ ಅನುಮೋದನೆಗೊಳ್ಳಲು ಕೂಡ ಸಂಸದ ಪ್ರತಾಪ್ ಸಿಂಹ ಕಾರಣರಾಗಿ 35ವರ್ಷಗಳ ನಮ್ಮ ಜನಾಂಗದ ಸಮಸ್ಯೆ ನಿವಾರಣೆಗೆ ಪರಿಹಾರ ದೊರಕಿಸಿಕೊಟ್ಟಿದ್ದಾರೆ ಎಂದರು.

ರಾಜ್ಯ ಸಭೆ ಮತ್ತು ಲೋಕಸಭೇಯಲ್ಲಿ ಅಂಗೀಕಾರವಾಗಲು ನಮ್ಮ ರಾಜ್ಯದ ಸಂಸದರುಗಳು ಮತ್ತು ಮಂತ್ರಿಗಳು ಹೆಚ್ಚಿನ ರೀತಿ ಸಹಕರಿಸಿದ್ದಾರೆ. ಮಹರ್ಷಿ ವಾಲ್ಮೀಕಿ ಸಂಸ್ಥಾನ ಮಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿಯವರು ನಮ್ಮ ಈ ಹೋರಾಟದಲ್ಲಿ ಕ್ಷಣಕ್ಞಣಕ್ಕೂ ಸ್ಪಂದಿಸಿದ್ದು ಅವರಿಗೆ ಅಭಿನಂದನೆಗಳು ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಡಿ.ಮಹದೇವಪ್ಪ, ಎಂ.ರಾಮಚಂದ್ರ, ಎನ್.ಮಲ್ಲೇಶ್, ಕಾರ್ಯದರ್ಶಿಗಳಾದ ಕೆ.ಎನ್. ಅನಿಲ್ ಕುಮಾರ್, ಎಂ.ಪುಟ್ಟಣ್ಣ, ಮುಖಂಡರುಗಳಾದ ಸುಬ್ಬಣ್ಣ, ಸುಂದರ್, ಅಣ್ಣಯ್ಯ ನಾಯಕ, ಕೆಂಪನಾಯಕ, ಮಹದೇವಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: