ಮೈಸೂರು

ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿ ದೇಶಪ್ರೇಮಿಗಳ ದಿನಾಚರಣೆ ಆಚರಿಸಿದ ಪ್ರಜ್ಞಾವಂತ ನಾಗರಿಕ ವೇದಿಕೆ

ಮೈಸೂರು, ಫೆ.14:- ಪ್ರಜ್ಞಾವಂತ ನಾಗರಿಕ  ವೇದಿಕೆ ವತಿಯಿಂದ ಮೆಟ್ರೊ ಪೋಲ್ ಸರ್ಕಲ್ ಬಳಿ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿ ದೇಶಪ್ರೇಮಿಗಳ ದಿನಾಚರಣೆಯನ್ನಿಂದು ಆಚರಿಸಲಾಯಿತು.

ಸಮಾಜ ಸೇವಕರಾದ ಡಿ.ಟಿ ಪ್ರಕಾಶ್ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ಫೆ.14ನ್ನು ದೇಶಾದ್ಯಂತ ಪ್ರೇಮಿಗಳ ದಿನಾಚರಣೆಯನ್ನು ಆಚರಿಸುತ್ತಿದ್ದು, ಮೈಸೂರಿನ  ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ದೇಶ ಪ್ರೇಮಿಗಳ ದಿನಾಚರಣೆ ಹಾಗೂ ಪುಲ್ವಾಮಾ ದಾಳಿ ವಿಜಯೋತ್ಸವ ಕಾರ್ಯಕ್ರಮವನ್ನು ಆಚರಿಸಲು ನಿರ್ಧರಿಸಿರುವುದು ಶ್ಲಾಘನೀಯವೆಂದರು.

ಈ ಸಂದರ್ಭ ಬಿ.ಜೆ.ಪಿ.ಮುಖಂಡ ಜೋಗಿಮಂಜು, ಪ್ರಜ್ಞಾವಂತ ನಾಗರಿಕ ವೇದಿಕೆಯ ಅಧ್ಯಕ್ಷರಾದ ಕಡಕೊಳ ಜಗದೀಶ್ , ಪ್ರಶಾಂತ್  ಪತ್ರಿಕಾ ವಿತರಕರ ಸಂಘದ ಕಾರ್ಯದರ್ಶಿಗಳು ರವಿ,  ವಿಕ್ರಂ ಅಯ್ಯಂಗಾರ್,   ಲೋಹಿತ್ ,ಮಹದೇವ ಪ್ರಸಾದ್ , ಸುಚಿತ್, ಶಿವಪ್ರಕಾಶ್ ,ಚಕ್ರಪಾಣಿ ಹಾಗೂ ಮುಂತಾದ ದೇಶಪ್ರೇಮಿಗಳು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: