ಮೈಸೂರು

1400 ಮಂದಿ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ

ಮೈಸೂರು,ಫೆ.14-ಮಹಾರಾಣಿ ಮಹಿಳಾ ಮತ್ತು ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ 1400 ಮಂದಿ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಲಾಯಿತು.

ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ ವಿದ್ಯಾರ್ಥಿಯರಿಗೆ ಲ್ಯಾಪ್ ಟಾಪ್ ವಿತರಿಸಿದರು. ಒಂದು ಲ್ಯಾಪ್ ಟಾಪ್ ನ ಮೌಲ್ಯ 26000 ರೂ.ಗಳಾಗಿದ್ದು, 1400 ಲ್ಯಾಪ್ ಟಾಪ್ ನ ಒಟ್ಟು ಮೊತ್ತ 3.64 ಕೋಟಿ ರೂ.ಗಳಾಗಿದೆ.

ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲರಾದ ಡಾ.ಜಿ.ಎಚ್.ಮಹದೇವಸ್ವಾಮಿ, ಮುಖ್ಯಸ್ಥ ಪ್ರೊ.ಸೋಮಣ್ಣ, ಕಾಲೇಜಿನ ಎಂಬಿಎ ಮುಖ್ಯಸ್ಥರಾದ ಡಾ.ಆರ್.ನಳಿನಿ, ಎಂ.ಕಾಂ ಮುಖ್ಯಸ್ಥ ಡಾ.ಎಸ್.ಮಂಜು, ಪ್ರೊ.ಕೆ.ಟಿ.ವನಿತ, ಡಾ.ವಿ.ಮಂಜುನಾಥ್, ಬಸವರಾಜ ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: