ಕರ್ನಾಟಕಪ್ರಮುಖ ಸುದ್ದಿ

ವಿದ್ಯಾವಾರಿಧಿ ಶಾಲೆ ವಿಷಾಹಾರ ಪ್ರಕರಣದಲ್ಲಿ 4ನೇ ಸಾವು : ಸೆಕ್ಯುರಿಟಿ ಗಾರ್ಡ್‍ ರಮೇಶ್ ಕೊನೆಯುಸಿರು

ತುಮಕೂರು : ವಿದ್ಯಾವಾರಿಧಿ ಶಾಲೆಯಲ್ಲಿ ವಿಷಾಹಾರ ಸೇವನೆಯಿಂದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿದೆ. ಇದೇ ಘಟನೆಯಲ್ಲಿ ವಿಷಾಹಾರ ಸೇವಿಸಿ ತೀವ್ರ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದ ಸೆಕ್ಯುರಿಟಿ ಗಾರ್ಡ್‍ ರಮೇಶ್ ಅವರೂ ಕೂಡ ಸಾವನ್ನಪ್ಪಿದ್ದಾರೆ.

ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕ – ಐಸಿಯುನಲ್ಲಿದ್ದ ರಮೇಶ್, ಮೂರು ದಿನಗಳಿಂದಲೂ ಚಿಂತಾಜನಕ ಸ್ಥಿತಿಯಲ್ಲಿದ್ದರು. ಅವರಿಗೆ ಉಸಿರಾಡಲು ವೆಂಟಿಲೇಟರ್ ಅಳವಡಿಕೆ ಮಾಡಿ ಸತತ ನಿಗಾವಹಿಸಿ ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳಲು ಸಾಧ್ಯವಾಗದೆ ಕೊನೆಯುಸಿರೆಳೆದಿದ್ದಾರೆ.

ಮಕ್ಕಳು ಆಹಾರದ ರುಚಿಯಲ್ಲಿ ವ್ಯತ್ಯಾಸವಾಗಿದೆ ಎಂದು ಹೇಳಿದಾಗ ತಾವೇ ಅದನ್ನು ತಿಂದು ನೋಡಿ ಇತರ ಮಕ್ಕಳಿಗೆ ಊಟ ವಿಷವಾಗಿರುವ ಸಾಧ್ಯತೆ ಇದೆ ತಿನ್ನಬೇಡಿ ಎಂದು ಹೇಳಿದ್ದ ರಮೇಶ್, ಹಲವಾರು ಮಕ್ಕಳ ಜೀವ ಉಳಿಸಿ ತಮ್ಮ ಜೀವವನ್ನೇ ಬಲಿನೀಡಿದ್ದಾರೆ.

(ಎಸ್‍.ಎನ್-ಎನ್‍.ಬಿಎನ್‍)

Leave a Reply

comments

Related Articles

error: