ಮೈಸೂರು

ಸೆ.30 ರಿಂದ ಅಕ್ಟೋಬರ್ 5ರವರೆಗೆ ವಿಕ್ಟೊರ್ ಕಾರ್ಚ್ ನಾಯ್ ಫಿಡೆ ರೇಟಿಂಗ್ ಚೆಸ್ ಪಂದ್ಯಾವಳಿ

ವಿಕ್ಟೊರ್ ಕಾರ್ಚ್ ನಾಯ್ ಫಿಡೆ ರೇಟಿಂಗ್ ನ ಮೊದಲ ಚೆಸ್ ಪಂದ್ಯಾವಳಿಯನ್ನು ಮೈಸೂರಿನ ಚೆಸ್ ಸಂಸ್ಥೆ ಹಾಗೂ ಅಂತೆ ಕಂತೆ.ಕಾಮ್ ಸಹಯೋಗದಲ್ಲಿ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 5ರವರೆಗೆ ಹೋಟೆಲ್ ದಾಸಪ್ರಕಾಶ್ ಪ್ಯಾರಡೈಸ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಚೆಸ್ ಸೆಂಟರ್ ವ್ಯವಸ್ಥಾಪಕ ನಾಗೇಂದ್ರ ತಿಳಿಸಿದರು. ಅವರು ಸೆ.27ರಂದು ಪತ್ರಕರ್ತರ ಭವನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಖ್ಯಾತ ಅಂತಾರಾಷ್ಟ್ರೀಯ ಮಟ್ಟದ ಚದುರಂಗ ಪಟುಗಳಾದ ರವಿ ಹೆಗ್ಗಡೆ, ಬಾಲಸುಬ್ರಹ್ಮಣ್ಯ, ಎನ್.ಸಂಜಯ್ ಅರವಿಂದ್ ಶಾಸ್ತ್ರಿ ಭಾಗವಹಿಸುವರು. ಅಂತೆ ಕಂತೆ.ಕಾಮ್ ಅಂರ್ತಜಾಲ ತಾಣವು ಪ್ರಾಯೋಜಕತ್ವವನ್ನು ವಹಿಸಿದೆ. ವಿಜೇತರಿಗೆ 1 ಲಕ್ಷದ 50 ಸಾವಿರ ಮೊತ್ತದ 45 ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ವಿತರಿಸಲಾಗುವುದು  ನೋಂದಾವಣಿಗೆ www.mysorechess.in ಅನ್ನು ಭೇಟಿ ಮಾಡಿ ಹೆಚ್ಚಿನ ಮಾಹಿತಿಗಾಗಿ 81238 19220 / 99807 63063 ಅನ್ನು ಸಂಪರ್ಕಿಸಬಹುದು.

Leave a Reply

comments

Tags

Related Articles

error: