ಪ್ರಮುಖ ಸುದ್ದಿ

ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

ರಾಜ್ಯ( ಮಡಿಕೇರಿ) ಫೆ.15 :- ಕಳೆದ 15 ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಮುಸ್ಲಿಂ ಸಮಾಜದ ಬಡ ಹಾಗೂ ಅನಾಥ ಹೆಣ್ಣುಮಕ್ಕಳ ಉಚಿತ ಸಾಮೂಹಿಕ ವಿವಾಹ ನಡೆಸಿಕೊಡುತ್ತಿರುವ ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿಯು ಈ ಬಾರಿಯೂ ಕೂಡ 25 ಹೆಣ್ಣುಮಕ್ಕಳ ವಿವಾಹ ನಡೆಸಿಕೊಡುವ ಗುರಿಯನ್ನು ಇರಿಸಿಕೊಂಡಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿರುವ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ವಧುವಿಗೆ 5 ಪವನ್ ಚಿನ್ನಾಭರಣ, ವಧೂ ವರರಿಗೆ ಹೊಸ ಉಡುಪು, ಹಾಗೂ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವ ಸರ್ವರಿಗೂ ಭೋಜನ ವ್ಯವಸ್ಥೆಯನ್ನು ಮಾಡಿಕೊಡುವ ಮೂಲಕ ಏಪ್ರಿಲ್ 19ರಂದು ಈ ಸಾಮೂಹಿಕ ವಿವಾಹ ನಡೆಸಲು ನಿರ್ಧರಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿರುವ 18 ವರ್ಷ ತುಂಬಿರುವವರು ಈ ಕೆಳಕಂಡ ಊರುಗಳಿಂದ ಅರ್ಜಿ ನಮೂನೆಯನ್ನು ಪಡೆದು ಕೊಂಡು ಮಾರ್ಚ್ 25 ಒಳಗಾಗಿ ಸೂಕ್ತ ದಾಖಲೆಗಳೊಂದಿಗೆ ಅಲ್ ಅಮೀನ್ ಕಚೇರಿಗೆ ತಲುಪಿಸುವಂತೆ ಕೋರಲಾಗಿದೆ.

ಅರ್ಜಿ ನಮೂನೆ ದೊರೆಯುವ ಊರುಗಳು

ಮಡಿಕೇರಿ- ಫೈವ್ ಸ್ಟಾರ್ ವಾಚ್ ವರ್ಕ್ಸ್ ಕಾರು ನಿಲ್ದಾಣ 9844534743, ಸೋಮವಾರಪೇಟೆ- ವಾಕ್ ಅಂಡ್ ವೇರ್ ಶೂ ಶಾಪ್ 9448585556, ಕುಶಾಲನಗರ- ರಿಹಾನಾ ಕ್ಯಾಂಟೀನ್ ಹಿಲಾಲ್ ಮಸೀದಿ ಸಮೀಪ 9008737340 ಐ, ಸುಂಟಿಕೊಪ್ಪ-ಆರ್. ಹಸನ್ ಕುಞ ಹಾಜಿ ಕೆಇಬಿ ಹಿಂಭಾಗ 9886863045, ನೆಲ್ಲಿಹುದಿಕೇರಿ- ಎ .ಕೆ. ಹಕೀಂ 9448354568, ಗೋಣಿಕೊಪ್ಪಲು-ಬಸೀರ್ ಹಾಜಿ-ಟೈಮ್ ವಿಜನ್ 8289887668, ಕೊಡ್ಲಿಪೇಟೆ- ಸುಲೇಮಾನ್ ಹ್ಯಾಂಡ್ ಪೋಸ್ಟ್, 9448721203, ವಿರಾಜಪೇಟೆ- ನೌಫಾಲ್ ಗ್ರೀನ್ ಲ್ಯಾಂಡ್ ಬನಾನ ಮಂಡಿ ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆ
9483423238, ಮೂರ್ನಾಡು- ಹಸ್ಗರ್ ಕ್ವಾಲಿಟಿ ಕೋಲ್ಡ್ ಸ್ಟೋರೇಜ್ ಬಸ್ ನಿಲ್ದಾಣ 9611722492,ನಾಪೋಕ್ಲು- ಹನೀಫಾ 9980159845
ಶನಿವಾರಸಂತೆ-ಅಜರುದ್ದೀನ್ ಎಂ ಬಿ ಚಿಕನ್ ಸೆಂಟರ್ 8792374123 (ಕೆಸಿಐ,ಎಸ್.ಎಚ್)

Leave a Reply

comments

Related Articles

error: