ಕರ್ನಾಟಕಪ್ರಮುಖ ಸುದ್ದಿ

ಹವಾಮಾನ ವೈಪರೀತ್ಯ: ಮಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್

ಮಂಗಳೂರು,ಫೆ.15- ಹವಾಮಾನ ವೈಪರೀತ್ಯದಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಬೇಕಿದ್ದ ವಿಮಾನ ಮಾರ್ಗ ಬದಲಿಸಿ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿದೆ.

ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿದೆ. ದಮ್ಮಾಮ್ ಮತ್ತು ದುಬೈ ನಿಂದ ಬಂದಿದ್ದ ಏರ್ ಇಂಡಿಯಾ ವಿಮಾನ ಮುಂಜಾವು 4.30ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದು, ಆದರೆ 8.30 ಕ್ಕೆ ಬಂದಿದ್ದ ಮತ್ತೊಂದು ವಿಮಾನ ನೇರವಾಗಿ ಬೆಂಗಳೂರಿನಲ್ಲಿ ಇಳಿದಿದೆ.

ಬೆಂಗಳೂರಿನಿಂದ ಬೆಳಿಗ್ಗೆ 8 ಗಂಟೆಗೆ ಹೊರಟಿದ್ದ ಸ್ಪೈಸ್ ಜೆಟ್, ಇಂಡಿಗೋ ವಿಮಾನಗಳು ಮಂಗಳೂರಿನಲ್ಲಿ ಮಬ್ಬು ಕವಿದ ವಾತಾವರಣವಿದ್ದರಿಂದ ಮರಳಿ ಬೆಂಗಳೂರಿಗೆ ವಾಪಸ್ಸಾಗಿದೆ ಎಂದು ವರದಿಯಾಗಿದೆ.

ಹೈದರಬಾದ್ ನಿಂದ ಬಂದಿದ್ದ ಮತ್ತೊಂದು ವಿಮಾನಕ್ಕೂ ಹವಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಲ್ಯಾಂಡ್ ಆಗಲು ಅನುಮತಿ ದೊರೆತಿಲ್ಲ.

ಮಂಗಳೂರಿನಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ಬೆಳಿಗ್ಗೆ 7 ಗಂಟೆಯಿಂದ ವಿಮಾನದ ಲ್ಯಾಂಡಿಂಗ್ ಮತ್ತು ಟೇಕಾಫ್​ ಸ್ಥಗಿತಗೊಂಡಿದೆ. ದುಬೈ ಸೇರಿ ದೇಶದ ನಾನಾ ಭಾಗಗಳು ಮತ್ತು ವಿವಿಧ ದೇಶಗಳಿಂದ ಲ್ಯಾಂಡಿಂಗ್ ಆಗಬೇಕಿದ್ದ ವಿಮಾನಗಳ ಸಮಯದಲ್ಲಿ ಇಂದು ವ್ಯತ್ಯಯವಾಗಿದೆ. ಇದರಿಂದ ಕೆಲಕಾಲ ವಿಮಾನ ಪ್ರಯಾಣಿಕರಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಮಂಗಳೂರಿನಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿತ್ತು. (ಎಂ.ಎನ್)

Leave a Reply

comments

Related Articles

error: