ಮನರಂಜನೆ

‘ಮದಗಜ’ ಸಿನಿಮಾಗೆ ನಾಯಕಿಯಾದ ಆಶಿಕಾ ರಂಗನಾಥ್

ಬೆಂಗಳೂರು,ಫೆ.15- ರೋರಿಂಗ್ ಸ್ಟಾರ್‌ ಶ್ರೀಮುರಳಿ ಅಭಿನಯದ ‘ಮದಗಜ’ ಸಿನಿಮಾದ ನಾಯಕಿ ಯಾರೆಂಬುದು ರಿವೀಲ್ ಆಗಿದೆ. ನಟಿ ಆಶಿಕಾ ರಂಗನಾಥ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಶ್ರೀಮುರಳಿ ತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರದ ನಾಯಕಿ ಯಾರೆಂಬುದನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ ಅವರ ಫಸ್ಟ್ ಲುಕ್ ಸಹ ಬಹಿರಂಗವಾಗಿದೆ.

ಲಂಗ ದಾವಣಿ ಹಾಕಿಕೊಂಡು ಕೈನಲ್ಲಿ ಬುಟ್ಟಿ, ಸಲಿಕೆ ಹಿಡಿದುಕೊಂಡು ಆಶಿಕಾ ರಂಗನಾಥ್ ಪೋಸ್ ನೀಡಿದ್ದಾರೆ. ವ್ಯವಸಾಯ ಮಾಡುವ ಹಳ್ಳಿ ಹುಡುಗಿಯ ಪಾತ್ರದಲ್ಲಿ ಆಶಿಕಾ ರಂಗನಾಥ್ ಅಭಿನಯಿಸಲಿದ್ದಾರೆ.

ಪ್ರೇಮಿಗಳ ದಿನದ ವಿಶೇಷವಾಗಿ ಸಿನಿಮಾದ ನಾಯಕಿ ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಸ್ವಾಗತ ಮಾಡಲಾಗಿದೆ. ಸಿನಿಮಾದ ಚಿತ್ರೀಕರಣ ಫೆ.20 ರಂದು ಪ್ರಾರಂಭವಾಗಲಿದೆ.

ಮೊದಲ ಬಾರಿಗೆ ಈ ರೀತಿಯ ಪಾತ್ರದಲ್ಲಿ ಆಶಿಕಾ ನಟಿಸುತ್ತಿದ್ದು, ನಾಯಕಿ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ ಎಂದು ನಿರ್ದೇಶಕ ಮಹೇಶ್ ಕುಮಾರ್ ಹೇಳಿದ್ದಾರೆ. ‘ಅಯೋಗ್ಯ’ ನಂತರ ಮಹೇಶ್ ಕುಮಾರ್ ನಿರ್ದೇಶಕ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಉಮಾಪತಿ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ದೊಡ್ಡ ಸ್ಟಾರ್ ಬಳಗ ಸಿನಿಮಾದಲ್ಲಿ ಇರಲಿದೆ. (ಎಂ.ಎನ್)

Leave a Reply

comments

Related Articles

error: