ಮೈಸೂರು

ದೇವರಾಜ ಮಾರುಕಟ್ಟೆ ಕೆಡವಲು ತೀರ್ಮಾನಿಸಿರುವ ಮಹಾನಗರ ಪಾಲಿಕೆ ನಿರ್ಧಾರಕ್ಕೆ ರಾಜವಂಶಸ್ಥ ಯದುವೀರ್ ಒಡೆಯರ್ ವಿರೋಧ

ಮೈಸೂರು,ಫೆ.15:- ಮೈಸೂರಿನ ದೇವರಾಜ ಮಾರುಕಟ್ಟೆ ಕೆಡವಲು ತೀರ್ಮಾನಿಸಿರುವ ಮಹಾನಗರ ಪಾಲಿಕೆ ನಿರ್ಧಾರಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರೋಧ ವ್ಯಕ್ತಪಡಿಸಿದರು.

ಇಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು ದೇವರಾಜ ಮಾರುಕಟ್ಟೆ ಪಾರಂಪರಿಕ ಕಟ್ಟಡವಾಗಿದೆ. ಅದನ್ನು ಹಾಗೆಯೇ ಉಳಿಸಿಕೊಳ್ಳಬೇಕು.ದೇವರಾಜ ಮಾರುಕಟ್ಟೆಯನ್ನು ಸುಣ್ಣಗಾರೆ ಬಳಸಿ ನಿರ್ಮಾಣ ಮಾಡಲಾಗಿದೆ. ದೇವರಾಜ ಮಾರುಕಟ್ಟೆಯ ವಾಸ್ತವ ಸ್ಥಿತಿ ಪರಿಶೀಲಿಸಲು ನೇಮಿಸಿದ್ದ ತಜ್ಞರ ಸಮಿತಿಯಲ್ಲಿ ಪ್ರೊಫೆಸರ್ ರಂಗರಾಜು ಅವರನ್ನು ಹೊರತುಪಡಿಸಿದರೆ ಬೇರೆ ಯಾರೂ ನುರಿತ ಪಾರಂಪರಿಕ ತಜ್ಞರು ಇರಲಿಲ್ಲ. ಹಾಗಾಗಿ ದೇವರಾಜ ಮಾರುಕಟ್ಟೆ ಕೆಡವಬೇಕೆಂದು ತಜ್ಞರ ಸಮಿತಿ ನೀಡಿರುವ ವರದಿ ಅವೈಜ್ಞಾನಿಕವಾಗಿದೆ ಎಂದರು.

ಹೆರಿಟೇಜ್ ಕಮಿಟಿಯಲ್ಲಿ ಪ್ರೊಫೆಸರ್ ರಂಗರಾಜು ಬಿಟ್ಟರೆ ಉಳಿದವರೆಲ್ಲ ಸಿವಿಲ್ ಇಂಜಿನಿಯರ್ ಗಳು. ಪ್ರೊಫೆಸರ್ ರಂಗರಾಜು ಆರ್ಕಿಯಾಲಜಿಸ್ಟ್. ಸಿವಿಲ್ ಇಂಜಿನಿಯರ್ ಗಳಿಗೆ ಕಾಂಕ್ರಿಟ್ ಕಟ್ಟಡದ ಬಗ್ಗೆ ತಿಳಿದಿರೋದು. ಅವರು ಅದರ ಬಗ್ಗೆ ತಿಳಿಸಿದರೆ ನಾನು ಒಪ್ಕೋಬಹುದು. ಆದರೆ ಇದು ಪಾರಂಪರಿಕ ಕಟ್ಟಡ. ಕನ್ಸರ್ವೇಟಿವ್ ಆರ್ಕಿಟೆಕ್ಟ್ ನಿಂದ ಒಂದು ಅಭಿಪ್ರಾಯ ತಿಳ್ಕೋಬೇಕಾಗಿದೆ. ಹೆರಿಟೇಜ್ ಕಮಿಟಿ ನೀಡಿರೋ ಅಭಿಪ್ರಾಯ , ವರದಿ ಒಪ್ಪೋಕಾಗಲ್ಲ ಎಂದು ಸ್ಪಷ್ಟಪಡಿಸಿದರು.

ಕೋರ್ಟ್ ನಿಂದ ಯಾವುದೇ ಆದೇಶ ಬಂದಿಲ್ಲ. ಹೆರಿಟೇಜ್ ಕಮಿಟಿ ಸೆಟ್ ಅಪ್ ಮಾಡಿ ಹೆರಿಟೇಜ್ ಕಮಿಟಿ ಅಭಿಪ್ರಾಯ ಬಂದ ನಂತರ ನೀವು ನಿರ್ಧಾರ ತಗೋಬಹುದು ಅಂತ ಕೋರ್ಟ್ ನಿಂದ  ಆದೇಶ ಬಂದಿದೆ. ಅವರು ಯಾವುದೇ ರೀತಿಯ ಡೆಮೊಲಿಶನ್ ಮಾಡಬೇಕೆಂದು ಆದೇಶ ಬಂದಿಲ್ಲ. ಯಥಾಸ್ಥಿತಿ ಕಾಪಾಡುವಂತೆ ಹೇಳಿದೆ. ಮಹಾನಗರ ಪಾಲಿಕೆಯ ಆಯುಕ್ತರು, ಮೇಯರ್ ಅವರು ಹೇಳುತ್ತಿರೋದು ತಪ್ಪು. ನನಗೆ ಅವರಲ್ಲಿ ನಂಬಿಕೆಯಿದೆ. ಎಲ್ಲರೂ ಕುಳಿತು ಸರಿಯಾಗಿ ಚರ್ಚೆ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: