ಮೈಸೂರು

ಫೆ.17 : ಗುರು-ಶಿಷ್ಯೆಯ  ವಿಶೇಷ ಭರತನಾಟ್ಯ ಕಾರ್ಯಕ್ರಮ

ಮೈಸೂರು,ಫೆ.15:- ವಿದುಷಿ ಸಿ.ಎನ್.ಅನಿತ ಮತ್ತವರ ಶಿಷ್ಯೆ ರಮ್ಯಾ ರಾಜೇಶ್ ಗುರುಶಿಷ್ಯೆಯರ ವಿಶೇಷ ಭರತನಾಟ್ಯ ಕಾರ್ಯಕ್ರಮವನ್ನು ಮೈಸೂರು  ಜೆ.ಎಲ್.ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಫೆ.17ರಂದು ಸಂಜೆ 6ಗಂಟೆಗೆ ಏರ್ಪಡಿಸಲಾಗಿದೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ನೃತ್ಯ ವಿದ್ಯಾಪೀಠದ ವಿದುಷಿ ಸಿ.ಎನ್.ಅನಿತ ಮಾತನಾಡಿ ಶಿಷ್ಯೆ ತನ್ನ ಕಲಿಕಾ ಉದ್ದೇಶ ಹಾಗೂ ಕಲಿಕಾ ಕ್ರಮ ಸೂಕ್ತವಾದ ದಿಕ್ಕಿನಲ್ಲಿದೆ ಎಂಬುದನ್ನು ಗುರುವಿನೊಂದಿಗೆ ತನ್ನ ಕಲೆಯನ್ನು ಪ್ರದರ್ಶಿಸಿ ದೃಢಪಡಿಸುವುದು ಈ ವಿಶೇಷ ಕಾರ್ಯಕ್ರಮದ ಉದ್ದೇಶವಾಗಿದೆ.

ಗುರು-ಶಿಷ್ಯೆಯ ವಿಶೇಷ ನೃತ್ಯ ಕಾರ್ಯಕ್ರಮವನ್ನು ಮೈಸೂರಿನ ಮಾತಾ ಅಮೃತಾನಂದಮಯಿ ಮಠದ ಬ್ರಹ್ಮಚಾರಿ ರಾಮಕೃಷ್ಣನ್ ಉದ್ಘಾಟಿಸಲಿದ್ದು, ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಫೌಂಡೇಶನ್ ಅಧ್ಯಕ್ಷರಾದ ಎಂ.ಬಿ.ಸಂತೋಷ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದು, ಹಿರಿಯ ಆರ್ಥೋ ಸರ್ಜನ್ ಡಾ.ವಾಸಿಕಿ ಹಾಗೂ ಹಿರಿಯ ಶಿಕ್ಷಕಿ ಶಾರದ ಹೆಚ್.ಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗುರು ವಿದುಷಿ ಅನಿತ ಅವರ ನೃತ್ಯ ಸಂಯೋಜನೆಯ ಈ ವಿಶೇಷ ಕಾರ್ಯಕ್ರಮಕ್ಕೆ ಉತ್ತಮ ಸಂಗೀತ ಸಹಕಾರವನ್ನು ನಟುವಾಂಗದಲ್ಲಿ ನೃತ್ಯ ವಿದ್ಯಾಪೀಠದ ಹಿರಿಯ ಶಿಷ್ಯೆ ನಿಶ್ಚಿತ ಕೃಷ್ಣ, ಹಾಡುಗಾರಿಕೆಯಲ್ಲಿ ವಿದ್ವಾನ್ ರಾಕೇಶ್ ಸುಧೀರ್, ಮೃದಂಗದಲ್ಲಿ ವಿಕ್ರಂ ಭಾರದ್ವಾಜ್ ವೈ.ಪಿ, ವೇಣುವಾದನದಲ್ಲಿ ವಿದ್ವಾನ್ ಎ.ಪಿ.ಕೃಷ್ಣಪ್ರಸಾದ್  ನೀಡಲಿದ್ದಾರೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿ ಸುಮಿತ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: