ಮೈಸೂರು

ಸ್ತ್ರೀ-ಪುರುಷ ಜೊತೆಯಲ್ಲಿ ಸಾಗಿದಾಗ ಸಮಾಜದ ಅಭಿವೃದ್ಧಿ ಸಾಧ್ಯ : ಶಾಸಕ ಜಿ.ಟಿ.ದೇವೇಗೌಡ

ಹೆಣ್ಣು ಮತ್ತು ಗಂಡು ಜೊತೆಯಲ್ಲಿ ಸಾಗಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಮೈಸೂರಿನ ಸಾಹುಕಾರ ಚೆನ್ನಯ್ಯ ರಸ್ತೆಯಲ್ಲಿರುವ ವಿನಾಯಕ ವೃತ್ತದ ಉದ್ಯಾನವನದಲ್ಲಿ ಮಾನವ ಹಕ್ಕುಗಳ ಅರಿವು ಕಾರ್ಯಕ್ರಮ ಹಾಗೂ ಮಹಿಳಾ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪುರುಷರ ನಾಯಕತ್ವದಲ್ಲಿ ಮಹಿಳೆಯರು ಯಶಸ್ಸಿನ ಉತ್ತುಂಗಕ್ಕೆ ಏರುತ್ತಿದ್ದಾರೆ. ಹೆಣ್ಣು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗಿಂತಲೂ ಹೆಚ್ಚು ಮುನ್ನಡೆ ಸಾಧಿಸುತ್ತಿದ್ದಾಳೆ. ಪ್ರತಿಯೊಂದು ರಂಗದಲ್ಲೂ ತನ್ನದೇ ಛಾಪು ಮೂಡಿಸುತ್ತಿದ್ದಾಳೆ. ಎರಡೂ ಕೈ ಸೇರಿದರೆ ಯಾವ ರೀತಿ ಚಪ್ಪಾಳೆ ಆಗಲಿದೆಯೋ, ಅದೇ ರೀತಿ ಸ್ತ್ರೀ ಮತ್ತು ಪುರುಚರೀರ್ವರೂ ಜೊತೆಯಾಗಿ ನಡೆದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

ಉದಾಹರಣೆಯಾಗಿ ಇಲ್ಲೇ ಇರುವ ಪುಷ್ಪಲತಾ ಚಿಕ್ಕಣ್ಣ ಮತ್ತು ಟಿ.ಬಿ.ಚಿಕ್ಕಣ್ಣ ಅವರೇ ಸಾಕ್ಷಿಯಾಗಿದ್ದಾರೆ. ಅವರಿಬ್ಬರೂ ಜೊತೆಯಾಗಿ ಸಾಗಿದ್ದರಿಂದಲೇ ಇವತ್ತು ಇಷ್ಟು ಸಾಧನೆ ಮಾಡಲು ಸಾಧ್ಯವಾಯಿತು. ಪುರುಷರು ತಾನು ಎನ್ನುವ ಅಹಂನ್ನು ಬಿಟ್ಟು ಮಹಿಳೆಯರನ್ನು ಜೊತೆಯಲ್ಲಿ ಕರೆದೊಯ್ಯಬೇಕು. ಮಹಿಳೆಯರಿಗೂ ಸಮಾನ ಅವಕಾಶ ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಗಳಾದ ಟಿ.ಬಿ.ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಸಮಾಕಸೇವಕಿ ಲತಾ ರಂಗನಾಥ ಮತ್ತಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: