ಕರ್ನಾಟಕಪ್ರಮುಖ ಸುದ್ದಿ

ಇನ್ನೆರಡು ವಾರದಲ್ಲಿ ಹಾಸನ–ಬೆಂಗಳೂರು ರೈಲು ಸಂಚಾರ ಆರಂಭ

ಶ್ರವಣಬೆಳಗೊಳ : ಹಾಸನ ಬೆಂಗಳೂರು ರೈಲು ಸಂಚಾರ ಇನ್ನೆರಡು ವಾರದಲ್ಲಿ ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಇಪ್ಪತ್ತೈದು ವರ್ಷಗಳಷ್ಟು ಹಳೆಯದಾದ ಈ ಯೋಜನೆ ಇದೀಗ ಪೂರ್ಣಗೊಂಡಿದ್ದು, ಸಂಚಾರ ಆರಂಭಿಸಲು ಸಿದ್ಧವಾಗಿದೆ.

ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಮುನ್ನ ಈ ರೈಲು ಸಂಚಾರ ಆರಂಭವಾಗಲಿದ್ದು, ಪ್ರವಾಸಿಗರಿಗೆ, ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ. ಈ ಮಾರ್ಗ ಆರಂಭವಾದರೆ ಬೆಂಗಳೂರು-ಮಂಗಳೂರು ಪ್ರಯಾಣದ ಅಂತರ ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವುದು.

ಈ ಹಿಂದಿ  ಮಹಾಮಸ್ತಕಾಭಿಷೇಕ 2006ರಲ್ಲಿ ನಡೆದ ಸಂದರ್ಭ ಹಾಸನದಿಂದ ಶ್ರವಣಬೆಳಗೊಳದವರೆಗೆ ಮಾತ್ರ ರೈಲು ಸಂಚಾರ ಆರಂಭವಾಗಿತ್ತು. 2018ರ ಮಹಾಮಸ್ತಕಾಭಿಷೇಕದ ಹೊತ್ತಿಗೆ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಯ ಕಾಮಗಾರಿ ಪೂರ್ಣಗೊಂಡಿದ್ದು ಶೀಘ್ರವೇ ಕಾರ್ಯಾರಂಭ ಮಾಡಲಿದೆ.

ಈಗಾಗಲೇ ರೈಲ್ವೆ ಸುರಕ್ಷತಾ ತಂಡ ಪರಿಶೀಲನೆ ನಡೆಸಿ ಸಂಚಾರಕ್ಕೆ ಒಪ್ಪಿಗೆ ಸೂಚಿಸಿದೆ. ಶನಿವಾರ ಬೆಂಗಳೂರಿನಿಂದ ಹಾಸನಕ್ಕೆ ವಿಶೇಷ ರೈಲಿನಲ್ಲಿ ಪ್ರಯೋಗಾರ್ಥವಾಗಿ ಉನ್ನತ ಅಧಿಕಾರಿಗಳ ತಂಡ ಪ್ರಯಾಣ ಮಾಡಿ ಪರಿಶೀಲನೆ ನಡೆಸಿದೆ. ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಪ್ರಧಾನ ಪ್ರಬಂಧಕ ಅಶೋಕ್‌ಕುಮಾರ್‌ ಗುಪ್ತ, ಬೆಂಗಳೂರಿನ ಮುಖ್ಯ ಆಡಳಿತಾಧಿಕಾರಿ ಅಶೋಕ್ ಗುಪ್ತ, ಮುಖ್ಯ ಎಂಜಿನಿಯರ್‌ ಶರತ್‌ಕುಮಾರ್‌ ಜೈನ್‌, ಡಿ.ಆರ್.ಎಂ.ಸಂಜೀವ್‌ ಅಗರ್‌ವಾಲ್‌ ಅವರನ್ನು ಒಳಗೊಂಡ ತಂಡ ಹಳಿ ಹಾಗೂ ಭದ್ರತೆ ಪರಿಶೀಲನೆ ನಡೆಸಿದೆ.

(ಎನ್‍.ಬಿಎನ್‍)

Leave a Reply

comments

Related Articles

error: