ಸುದ್ದಿ ಸಂಕ್ಷಿಪ್ತ

ಫೆ.21 ರಂದು ಶ್ರೀಭಗಂಡೇಶ್ವರ, ತಲಕಾವೇರಿ ದೇವಾಲಯದಲ್ಲಿ ವಿಶೇಷ ಪೂಜೆ

ಮಡಿಕೇರಿ ಫೆ.15 :- ಮಹಾಶಿವರಾತ್ರಿ ಪ್ರಯುಕ್ತ ಫೆಬ್ರವರಿ, 21 ರಂದು ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯದಲ್ಲಿ ಬೆಳಗ್ಗೆ 7 ಗಂಟೆಯಿಂದ ಶತ ರುದ್ರ ಪಾರಾಯಣ, ರುದ್ರ ಹೋಮ, ಕಾರ್ಯಕ್ರಮ ಹಾಗೂ ಸಂಜೆ 7 ಗಂಟೆಯಿಂದ ದೇವರ ನೃತ್ಯ, ಮಹಾಪೂಜೆ, ಪ್ರಸಾದ ವಿತರಣೆಯಾಗಲಿದೆ. ನಂತರ ರಾತ್ರಿ 11 ಗಂಟೆಯಿಂದ ಯಕ್ಷಗಾನ ಬಯಲಾಟ ಕಾರ್ಯಕ್ರಮ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಪ್ರಕಟಣೆಯಲ್ಲಿ ಕೋರಿದೆ.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: