ದೇಶ

ಹೃದಯಾಘಾತದಿಂದ ಯುವನಟ ನಂಡೂರಿ ಉದಯ್ ಕಿರಣ್ ನಿಧನ

ಹೈದರಾಬಾದ್,ಫೆ.15-ಟಾಲಿವುಡ್ ನ ಯುವನಟ ನಂಡೂರಿ ಉದಯ್ ಕಿರಣ್ (34) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಶುಕ್ರವಾರ ರಾತ್ರಿ ಎದೆನೋವು ಕಾಣಿಸಿಕೊಂಡ ಅವರನ್ನು ಪಶ್ಚಿಮ ಗೋದಾವರಿ ಜಿಲ್ಲೆಯ ಕಾಕಿನಾಡ ಸರ್ಕಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉದಯ್ ಕಿರಣ್ ಅವರ ಅಂತಿಮ ದರ್ಶನ ಪಡೆದ ಹಲವು ರಾಜಕೀಯ ನಾಯಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಪರಾರೇ, ಫ್ರೆಂಡ್ಸ್ ಬುಕ್ ಎಂಬ ಸಿನಿಮಾಗಳಲ್ಲಿ ಉದಯ್ ಕಿರಣ್ ಅಭಿನಯಿಸಿದ್ದಾರೆ. ಹಲವು ತಮಿಳು ಸಿನಿಮಾಗಳಲ್ಲೂ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದರು.

ಹಲವು ಸಂದರ್ಭಗಳಲ್ಲಿ ವಿವಾದಕ್ಕೂ ಸಿಲುಕಿದ್ದರು ಉದಯ್ ಕಿರಣ್. ಉದಯ್ ಕಿರಣ್ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಮಾನಸಿಕ ಸ್ಥಿತಿ ಸರಿಯಿಲ್ಲದ ಕಾರಣ ಉದಯ್ ಕಿರಣ್ 2016ರಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದರು ಎಂದಿವೆ ಟಾಲಿವುಡ್ ಮೂಲಗಳು. (ಎಂ.ಎನ್)

Leave a Reply

comments

Related Articles

error: