ಪ್ರಮುಖ ಸುದ್ದಿ

ಪ್ರಸಿದ್ಧ ಕವಿ ಕುಮಾರ್ ವಿಶ್ವಾಸ್ ಅವರ ಫಾರ್ಚೂನರ್ ಕಾರು ಕಳ್ಳತನ

ದೇಶ(ದೆಹಲಿ)ಫೆ.15:-  ದೆಹಲಿ-ಎನ್‌ಸಿಆರ್‌ನಲ್ಲಿನ ಕಳ್ಳರು ಭಾರೀ ಕೈಚಳಕ ತೋರುತ್ತಿದ್ದು,  ದೆಹಲಿಯ ಪಕ್ಕದಲ್ಲಿರುವ ಗಾಜಿಯಾಬಾದ್‌ನ ಪ್ರಸಿದ್ಧ ಕವಿ ಕುಮಾರ್ ವಿಶ್ವಾಸ್  ತಮ್ಮ ಮನೆಯ ಹೊರಗೆ ನಿಲ್ಲಿಸಿದ್ದ ಫಾರ್ಚೂನರ್ ಕಾರನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರಂತೆ.

ಕಾರು ಕಳ್ಳತನದ   ಸಂಪೂರ್ಣ ಘಟನೆ  ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.   ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲು ಹಲವಾರು ತಂಡಗಳನ್ನು ರಚಿಸಲಾಗಿದೆ.

ಕುಮಾರ್ ವಿಶ್ವಾಸ್ ತಮ್ಮ ಕುಟುಂಬದೊಂದಿಗೆ ವಸುಂಧರಾ ಸೆಕ್ಟರ್ 3 ರಲ್ಲಿ ವಾಸಿಸುತ್ತಿದ್ದಾರೆ. ಕೆಲವು ದುಷ್ಕರ್ಮಿಗಳು ಕುಮಾರ್   ವಿಶ್ವಾಸ್ ಮನೆಯ ಮುಂದೆ  ನಿಲ್ಲಿಸಿದ್ದ ಫಾರ್ಚೂನರ್ ಕಾರನ್ನು ಕದ್ದು ನಂತರ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾರು ಕಳ್ಳತನದ   ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಸಿಸಿಟಿವಿ ದೃಶ್ಯಾವಳಿಯನ್ನು ವೀಕ್ಷಿಸಿದ್ದು,  ಅದರಲ್ಲಿ ಕಪ್ಪು ಕಾರಿನಲ್ಲಿ ಬಂದ ಕಳ್ಳರು ಕಾರನ್ನು ಕದ್ದು ಪರಾರಿಯಾಗಿದ್ದಾರೆಂದು  ಪೊಲೀಸರು ಹೇಳುತ್ತಾರೆ. ಪ್ರಸ್ತುತ  ತನಿಖೆ ನಡೆಸಲು ಪೊಲೀಸರು ಹಲವಾರು ತಂಡಗಳನ್ನು ರಚಿಸಿದ್ದಾರೆ. ತಮಡಗಳು ಕಳ್ಳರಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ ಎನ್ನಲಾಗಿದೆ. (ಎಸ್,ಎಸ್.ಎಚ್)

Leave a Reply

comments

Related Articles

error: