ಕ್ರೀಡೆ

ಪತ್ನಿಗೆ ವಿಚ್ಛೇದನ ನೀಡಿದ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್  :  ಮಿಲಿಯನ್ ಡಾಲರ್ ಪಾವತಿ

ವಿದೇಶ(ಆಸ್ಟ್ರೇಲಿಯ),ಫೆ.15:- ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಏಳು ವರ್ಷಗಳ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದು ಪತ್ನಿ ಕಾಯಲಿಗೆ ವಿಚ್ಛೇದನ ನೀಡಿದ್ದಾರೆ.

ಇವರಿಬ್ಬರು ಮೇ 2012 ರಲ್ಲಿ ವಿವಾಹವಾದರು ಮತ್ತು ನಾಲ್ಕು ವರ್ಷದ ಮಗಳು ಕೆಲ್ಸೆ ಲೀ ಕೂಡ ಇದ್ದಾರೆ. ಇಬ್ಬರೂ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ, “ಸ್ವಲ್ಪ ಸಮಯದವರೆಗೆ ಬೇರ್ಪಟ್ಟ ನಂತರ, ನಾವು ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಪರಸ್ಪರ ಒಪ್ಪಿಗೆಯಿಂದ ಬೇರ್ಪಡಲು ನಾವು ನಿರ್ಧರಿಸಿದ್ದೇವೆ. ಪ್ರತ್ಯೇಕವಾಗಿ ಉಳಿಯಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

“ನಾವು ಪರಸ್ಪರರ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದೇವೆ ಮತ್ತು ಪರಸ್ಪರ ಒಪ್ಪಿಗೆಯೊಂದಿಗೆ ನಾವು ಪ್ರತ್ಯೇಕತೆಯ ತೀರ್ಮಾನಕ್ಕೆ ಬಂದಿದ್ದೇವೆ. ಇದು ನಮ್ಮಿಬ್ಬರಿಗೂ ಒಳ್ಳೆಯದು ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ನಾವು ನಮ್ಮ ಮಗಳನ್ನು   ಪರಸ್ಪರರ ಸಹಕಾರದಿಂದ ನೋಡಿಕೊಳ್ಳಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ವಿಚ್ಛೇದನಕ್ಕಾಗಿ  ಕ್ಲಾರ್ಕ್ ತನ್ನ ಪತ್ನಿಗೆ  40 ಮಿಲಿಯನ್  ಡಾಲರ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. 2015 ರಲ್ಲಿ ಆಸ್ಟ್ರೇಲಿಯಾ ಮೈಕೆಲ್ ಕ್ಲಾರ್ಕ್ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದಿದೆ.  2015 ರಲ್ಲಿ ಆಡಿದ ವಿಶ್ವಕಪ್‌ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ನ್ಯೂಜಿಲೆಂಡ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಕ್ಲಾರ್ಕ್ 74 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಮೈಕೆಲ್ ಕ್ಲಾರ್ಕ್ ಆಸ್ಟ್ರೇಲಿಯಾ ಪರ 115 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: