ಪ್ರಮುಖ ಸುದ್ದಿ

ಮಧ್ಯಪ್ರದೇಶದ ಬಿಜೆಪಿಯ ಅಧ್ಯಕ್ಷರಾಗಿ ವಿಷ್ಣು ದತ್ ಶರ್ಮಾ ನೇಮಕ

ದೇಶ(ಮಧ್ಯ ಪ್ರದೇಶ)ಫೆ.15:-  ಬಿಜೆಪಿಯ ಹೊಸ ಮುಖ ವಿಷ್ಣು ದತ್ ಶರ್ಮಾ ಅವರನ್ನು ಮಧ್ಯಪ್ರದೇಶದ ಬಿಜೆಪಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ವಿಷ್ಣು ದತ್ ಶರ್ಮಾ ಪ್ರಸ್ತುತ ಮಧ್ಯಪ್ರದೇಶದ ಖಜುರಾಹೊ ಕ್ಷೇತ್ರದಿಂದ ಸಂಸದರಾಗಿದ್ದಾರೆ. ರಾಕೇಶ್ ಸಿಂಗ್ ಬದಲಿಗೆ ವಿ.ಡಿ.ಶರ್ಮಾ ಅವರನ್ನು ಮಧ್ಯಪ್ರದೇಶದ ಹೊಸ ಅಧ್ಯಕ್ಷರನ್ನಾಗಿ ಮಾಡಲು ಬಿಜೆಪಿಯ ಹೊಸ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನಿರ್ಧರಿಸಿದ್ದರು. ವಿ.ಡಿ.ಶರ್ಮಾ ಅವರು ಭಾರತೀಯ ಜನತಾ ಯುವ ಮೋರ್ಚಾದೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರು ಯಾವಾಗಲೂ ಸಂಘದ ಮೊದಲ ಆಯ್ಕೆಯೆಂದು ಪರಿಗಣಿಸಲ್ಪಟ್ಟರು.

ಈ ಜವಾಬ್ದಾರಿಯನ್ನು ಸ್ವೀಕರಿಸಿದ ವಿಷ್ಣು ದತ್ ಶರ್ಮಾ   ಟ್ವೀಟ್ ಮಾಡಿ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ  ಮಧ್ಯಪ್ರದೇಶ ಭಾರತೀಯ ಜನತಾ ಪಕ್ಷದ ರಾಜ್ಯ ಅಧ್ಯಕ್ಷರಾಗಿ ನನ್ನಂತಹ ಸಾಮಾನ್ಯ ಕಾರ್ಯಕರ್ತರಿಗೆ ಜವಾಬ್ದಾರಿಯನ್ನು ನೀಡಿದ್ದು, ಅವರ ಉನ್ನತ ನಾಯಕತ್ವಕ್ಕೆ ಧನ್ಯವಾದಗಳು. ಸಂಸ್ಥೆಯ ಜವಾಬ್ದಾರಿಗಳನ್ನು ಪೂರ್ಣ ಪ್ರಾಮಾಣಿಕತೆಯಿಂದ, ನಿಷ್ಠೆ, ಶ್ರದ್ಧೆಯಿಂದ   ನಿರ್ವಹಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: