ಮೈಸೂರು

48 ನೇ ವಾರ್ಡನ ಪಾಲಿಕೆ ಸದಸ್ಯೆ ಶೋಭಗೆ ಸನ್ಮಾನ

ಮೈಸೂರು,ಫೆ.17:-  25  ವರ್ಷಗಳಿಂದ ಸಮಸ್ಯೆ ಬಗೆ ಹರಿಸದೇ ಹಾಗೇ ಸಮಸ್ಯೆ ಉಳಿಸಿದ್ದ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿ ಕೊಟ್ಟಿದ್ದಕ್ಕೆ 48 ನೇ ವಾರ್ಡನ ಪಾಲಿಕೆ ಸದಸ್ಯೆ ಶೋಭ ಅವರನ್ನು ಚಿಕ್ಕರಹನ್ನಹಳ್ಳಿ ಗ್ರಾಮದ ಜನರು   ಸನ್ಮಾನ ಮಾಡಿದರು.

ಯಾರೇ ಚುನಾಯಿತರಾಗಿ  ಬಂದರೂ  ಸಮಸ್ಯೆ ಬಗೆಹರಿಸದೇ ಇದ್ದು,  ಇದೀಗ ಸಮಸ್ಯೆಯನ್ನು ಶೋಭ ಅವರು ಬಗೆಹರಿಸಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಮಾಡಿಕೊಟ್ಟಿದ್ದಕ್ಕಾಗಿ ಗ್ರಾಮದ ಜನರು ಸಂತೋಷದಿಂದ ಸಂಭ್ರಮಿಸಿದರು.

ಈ ಸಂದರ್ಭ ಪಾಲಿಕೆ ಸದಸ್ಯೆ ಶೋಭ ಮಾತನಾಡಿ  ನಾನು ಮಾಡಿದ ಕೆಲಸವನ್ನು ಗುರುತಿಸಿ ನನಗೆ ಸನ್ಮಾನ ಮಾಡಿರುವುದು ನನ್ನಲ್ಲಿನ ಜವಾಬ್ದಾರಿಯನ್ನು ಹೆಚ್ಚಿಸಿದೆ.  ಜನರು ಸಂತೋಷ ಪಟ್ಟರೆ ನನಗೆ ಪ್ರೋತ್ಸಾಹ ಲಭಿಸಿ ಕೆಲಸ ಮಾಡಲಿಕ್ಕೂ ಅನೂಕೂಲವಾಗುತ್ತೆ. ನನ್ನ ಅವಧಿಯಲ್ಲಿ ಸಾಧ್ಯವಾದಷ್ಟು ಕೆಲಸ ಮಾಡುತ್ತೇನೆಂದು   ಶೋಭ ಭರವಸೆ ನೀಡಿದರು.

ಗ್ರಾಮಸ್ಥರು ಮಾತನಾಡಿ ಯಾರೇ ಬಂದು ಇಲ್ಲಿ  ಚುನಾವಣೆಗೆ ಸ್ಪರ್ಧೆ ಮಾಡಿದರೂ ನಾವು ಶೋಭಾ ಅವರಿಗೆ ಮತ ಹಾಕೋದು. ಇವರು ನಮಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಇನ್ನೂ ಕೆಲವು   ಕುಂದು ಕೊರತೆಗಳು ಇವೆ. ಅದನ್ನು ಕೂಡ ಬಗೆಹರಿಸಲಿ ಎಂದು   ಮನವಿ ಮಾಡಿಕೊಂಡರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: