ಪ್ರಮುಖ ಸುದ್ದಿಮೈಸೂರು

ಬೋಡೋ ಲ್ಯಾಂಡ್ ಜೊತೆಯಲ್ಲೇ ಕೊಡವ ಲ್ಯಾಂಡ್ ಅಟೋನಮಿ/ಸ್ವಾಯತ್ತತೆಗೆ ಸಂಕಲ್ಪ ತೊಡಬೇಕೆಂದು ಸಿಎನ್ ಸಿ ಆಗ್ರಹ

ಮೈಸೂರು,ಫೆ.17:- ಬೋಡೋ ಲ್ಯಾಂಡ್ ಜೊತೆಯಲ್ಲೇ ಕೊಡವ ಲ್ಯಾಂಡ್ ಅಟೋನಮಿ/ಸ್ವಾಯತ್ತತೆಗೆ ಸಂಕಲ್ಪ ತೊಡಬೇಕೆಂದು ಸಿಎನ್ ಸಿ ಆಗ್ರಹಿಸಿದೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಬೋಡೋ ಲ್ಯಾಂಡ್ ಸ್ವಾಯತ್ತತೆಯೊಂದಿಗೆ ಅವರ ಸಂಸ್ಕೃತಿ, ಹೆಗ್ಗುರುತು, ಭಾಷೆ ರಕ್ಷಣೆ ಸೇರಿದಂತೆ ಆ ಪ್ರದೇಶದ ರಾಜಕೀಯ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಒತ್ತು ನೀಡಲಿರುವ ಅತಿ ಮಹತ್ವದ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದ್ದು, ಇದೇ ಮಾದರಿಯಲ್ಲೇ ಕೊಡಗಿನ ಅದಿಮ ಸಂಜಾತ ಬುಡಕಟ್ಟು ಸಮುದಾಯವಾದ ಕೊಡವರ ಆಶೋತ್ತರವಾದ ಕೊಡವ ಲ್ಯಾಂಡ್ ಭೂ-ರಾಜಕೀಯ ಹಕ್ಕೊತ್ತಾಯವನ್ನು ಮುಂದಿಟ್ಟು ಮೂರು ದಶಕಗಳ ಶಾಂತಿಯುತ ಶಿಷ್ಟಮಾರ್ಗದ ಬೇಡಿಕೆ ಮುಂದಿಟ್ಟು ಜನಮಾನದಲ್ಲಿ ನೆಲೆ ನಿಂತಿರುವ ಕೊಡವರ ಸಾಕ್ಷಿ ಪ್ರಜ್ಞೆಯಾದ ಕೊಡವ ನ್ಯಾಷನಲ್ ಕೌನ್ಸಿಲ್ ಮಂಡಿಸಿರುವ ಶಾಸನ ಬದ್ಧವಾದ ಹಕ್ಕೊತ್ತಾಯವನ್ನು ಪರಿಗಣಿಸಲು ಇದೇ ತೆರನಾದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಕೇಳಿಕೊಂಡರು.

ಆದಿಮ ಸಂಜಾತ ಕೊಡವ ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ಜನಮ್ ನೆಲೆಯಾದ 45ಪ್ರಾಚೀನ ಅವಿಭಾಜ್ಯ ನಾಡುಗಳನ್ನು ಕೊಡವರ ಸ್ವಯಂ ಶಾಸನದ ಜನ್ಮಭೂಮಿ ಕೊಡವ ಲ್ಯಾಂಡ್ ನ್ನು ಸಂವಿಧಾನದ 244, 371 ವಿಧಿಗಳು ರೆಡ್/ವಿತ್ 6 ಮತ್ತು 8ನೇ ಶೆಡ್ಯೂಲ್ ವ್ಯಾಪ್ತಿಯಲ್ಲಿ ರಾಜ್ಯಾಂಗ ಭದ್ರತೆ ನೀಡಬೇಕು. ವಿಶೇಷ ಹಾಗೂ ಸೂಕ್ಷ್ಮ ಸಾಂಸ್ಕೃತಿಕ ಒಳ ಕೋಶಗಳನ್ನು ಹೊಂದೊರುವ ಅದಿಮ ಸಂಜಾತ ಸೂಕ್ಷ್ಮಾತಿ ಸೂಕ್ಷ್ಮ ಅಲ್ಪಸಂಖ್ಯಾತ ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 ಮತ್ತು 342ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು. ಆದಿಮ ಸಂಜಾತ ಸೂಕ್ಷ್ಮಾತಿ ಸೂಕ್ಷ್ಮ ಅಲ್ಪಸಂಖ್ಯಾತ ಕೊಡವ ಬುಡಕಟ್ಟು ಕುಲ ಮತ್ತು ಅವರ ಅನನ್ಯ ಜನಪದೀಯ ಸಂಸ್ಕೃತಿಯನ್ನು ವಿಶ್ವರಾಷ್ಟ್ರ ಸಂಸ್ಥೆಯ ಯುನೆಸ್ಕೋದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿಸಬೇಕು. ಪ್ರಾಚೀನವು, ಶ್ರೀಮಂತವು, ಸಮೃದ್ಧವು, ಅಭಿಜಾತ ಭಾಷೆಯೂ ಆದ ಕೊಡವರ ಮಾತೃಭಾಷೆಯಾದ ಕೊಡವ ತಕ್ಕನ್ನು ಸಂವಿಧಾನದ 8ನೇ ಶೆಡ್ಯೂಲ್ ಗೆ ಸೇರಿಸಬೇಕು. ಶಸ್ತ್ರಾಸ್ತ್ರ ನಾಗರೀಕತೆಯಿಂದ ಉತ್ಪತ್ತಿಯಾದ ಕೊಡವರ ಧಾರ್ಮಿಕ ಸಂಸ್ಕಾರವಾದ ತೋಕ್ /ಬಂದೂಕ್ ಕೊಡವರ ಧಾರ್ಮಿಕ ಸಂಕೇತವಾಗಿದ್ದು ಇಂಡಿಯನ್ ಆರ್ಮ್ಸ್ ಆ್ಯಕ್ಟ್ ನ ಸೆಕ್ಷ್ನ 3ಮತ್ತು 4ರಲ್ಲಿನ ವಿಶೇಷ ವಿನಾಯತಿ ಯಾವುದೇ ನಿರ್ಬಂಧವಿಲ್ಲದೆ ನಿರಂತರ ಮುಂದುವರಿಯಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲಿಯಂಡ ಪ್ರಕಾಶ್, ಚಂಬಂಡ ಜನತ್ ಕುಮಾರ್, ಅಪ್ಪಾರಂಡ ಪೂವಣ್ಣ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: