ಮೈಸೂರು

ಎರಡು ಪ್ರತ್ಯೇಕ ಪ್ರಕರಣ : ತವರಿನಿಂದ ವರದಕ್ಷಿಣೆ ಹಣ ತರುವಂತೆ ಪತಿ ಮನೆಯವರಿಂದ ದೈಹಿಕ ಕಿರುಕುಳ : ದೂರು

ಮೈಸೂರು,ಫೆ.17:-  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತವರಿನಿಂದ ವರದಕ್ಷಿಣೆ ಹಣ ತರುವಂತೆ ಪತಿ ಮನೆಯವರು ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡುತ್ತಿರುವುದಾಗಿ ಮಹಿಳೆಯರೀರ್ವರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೊದಲ ಪ್ರಕರಣದಲ್ಲಿ ವಿದ್ಯಾಶ್ರೀ ಎಂಬವರೇ ದೂರು ನೀಡಿದವರಾಗಿದ್ದು,  #194/2, ಬನ್ನೂರು ರಸ್ತೆ, ಯರಗನಹಳ್ಳಿ ಯವರಾಗಿದ್ದು , ರೋಹಿತ್ ಎಂಬಾತನನ್ನು 15.06.2013 ಗುರು ಹಿರಿಯರ ಸಮಕ್ಷಮ ಸಂಪ್ರದಾಯದಂತೆ ಮದುವೆಯಾಗಿದ್ದರು. ಮದುವೆಯ ಸಮಯದಲ್ಲಿ  ಪತಿ ರೋಹಿತ್ ಮತ್ತು  ಸಾವಿತ್ರಿ ಎಂಬವರ ಬೇಡಿಕೆಯಂತೆ ಸಾಕಷ್ಟು ವರದಕ್ಷಿಣೆ ಕೊಟ್ಟಿದ್ದರು. ನಂತರದಲ್ಲಿ ರೋಹಿತ್  ಯಾವುದೇ ಕೆಲಸಕ್ಕೆ ಹೋಗದೇ, ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆಯಾಗಿ ಹಣ ಹಾಗೂ ಸೈಟನ್ನು ಬರೆಸಿಕೊಂಡು ಬರುವಂತೆ ಕಿರುಕುಳ ನೀಡಿದ್ದು,   ಬೇರೆ ಹೆಂಗಸಿನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ, ಈ ವಿಚಾರವನ್ನು ಕೇಳಿದ್ದಕ್ಕೆ   ಅವಾಚ್ಯ ಶಬ್ದಗಳಿಂದ ಬೈಯ್ದು, ಹೊಡೆದು ಹಿಂಸೆ ನೀಡಿ ಮನೆಯಿಂದ ಆಚೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ  ಶ್ವೇತಾ, ಜೆ ಪಿ ನಗರ ಎಂಬವರು    ಹರಿನಾಥ್ ಎಂಬಾತನನ್ನು 28.11.2013 ರಂದು ಗುರುಹಿರಿಯರ ಸಮಕ್ಷಮ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಬೇಡಿಕೆಯ ಮೇರೆಗೆ ಸಾಕಷ್ಟು ವರದಕ್ಷಿಣೆಯನ್ನು ಕೊಟ್ಟಿದ್ದಾರೆ. ಮದುವೆಯಾದ ನಂತರ ಹರಿನಾಥ್ ನೊಂದಿಗೆ   ವಿದ್ಯಾರಣ್ಯಂಪುರಂನಲ್ಲಿ ವಾಸವಾಗಿದ್ದೇನೆ. ಆ ಸಮಯದಲ್ಲಿ   ಗಾಯತ್ರಿ ಬಾಯಿ,   ಜಗದೀಶ ರಾವ್,  4 ಲಕ್ಷ್ಮಣ್  ಇವರು ಹೆಚ್ಚಿನ ವರದಕ್ಷಿಣೆ ತರುವಂತೆ ಬೈದು, ಹೊಡೆದು, ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದು ವರದಕ್ಷಿಣೆ ತರುವಂತೆ ದೈಹಿಕವಾಗಿ ಹಿಂಸಿಸಿ, ಕತ್ತನ್ನು ಹಿಸುಕಿ ಸಾಯಿಸಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: