ಪ್ರಮುಖ ಸುದ್ದಿ

ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಮೂವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

ರಾಜ್ಯ(ಹುಬ್ಬಳ್ಳಿ)ಫೆ.17:- ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ಬಂಧಿತರಾಗಿರುವ ಮೂವರು ಆರೋಪಿಗಳಿಗೆ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈ ನಡುವೆ ಮೂವರು ಆರೋಪಿಗಳಿಗೆ ಕೋರ್ಟ್ ಅವರಣದಲ್ಲೇ ಸಾರ್ವಜನಿಕರು ಥಳಿಸಿ ಚಪ್ಪಲಿ ಏಟು ಕೊಟ್ಟಿರುವ ಘಟನೆ ನಡೆದಿದೆ.

ಪಾಕ್ ಪರ ಘೋಷಣೆ ಕೂಗಿದ್ದ ಮೂವರು ಆರೋಪಿಗಳಾದ ಅಮೀರ್, ಬಾಸಿತ್, ತಾಲಿಬ್  ನನ್ನು ಇಂದು ಪೊಲೀಸರು ಹುಬ್ಬಳ್ಳಿ 3ನೇ ಜೆಎಂಎಫ್ ಜಿ ಕೋರ್ಟ್ ಗೆ ಹಾಜರುಪಡಿಸಿದ್ದರು. ಕೋರ್ಟ್ ಮೂವರು ಆರೋಪಿಗಳಿಗೆ ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿಗಳನ್ನು ಪೊಲೀಸರು ಕರೆದೊಯ್ಯುತ್ತಿದ್ದ ವೇಳೆ ಅಲ್ಲಿ ಸೇರಿದ್ದ ಗುಂಪು ನ್ಯಾಯಾಲಯದ ಆವರಣದಲ್ಲೇ  ಮೂವರು ಅರೋಪಿಗಳಿಗೆ ಥಳಿಸಲು ಮುಂದಾಗಿದ್ದಲ್ಲದೇ, ಆರೋಪಿಗಳ ಮೇಲೆ, ಕಲ್ಲು, ಶೂ, ಚಪ್ಪಲಿ ತೂರಾಟ ನಡೆಸಿದೆ. ಅಲ್ಲದೆ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಬಳಿಕ ಪೊಲೀಸರು ಅವರನ್ನು ಎಳೆದೊಯ್ದು ಪೊಲೀಸ್ ಜೀಪಿನಲ್ಲಿ ಕರೆದೊಯ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: