ಪ್ರಮುಖ ಸುದ್ದಿಮನರಂಜನೆ

ಖ್ಯಾತ ಗೀತ ರಚನೆಕಾರನಿಗೆ ಸಿಗದ  ಫಿಲ್ಮ್‌ಫೇರ್ ಅವಾರ್ಡ್  : ಕೊನೆಯ ಉಸಿರಿರುವರೆಗೆ ಅವಾರ್ಡ್ ಶೋಗೆ ಹೋಗಲ್ಲ ಎಂದ್ರು ಮನೋಜ್ ಮುಂಟಾಶೀರ್

ದೇಶ(ನವದೆಹಲಿ)ಫೆ.17:-   ಖ್ಯಾತ ಗೀತರಚನೆಕಾರ ಮನೋಜ್ ಮುಂಟಾಶೀರ್ ಅವರು 65 ನೇ ಫಿಲ್ಮ್‌ಫೇರ್‌ನಲ್ಲಿ ತಮ್ಮ ಹಾಡಿಗೆ ಪ್ರಶಸ್ತಿ ಸಿಗದ ಕಾರಣ ಅಸಮಾಧಾನಗೊಂಡಿದ್ದು,  ಯಾವುದೇ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋಗಲ್ಲ ಎಂದಿದ್ದಾರೆ.

ಅವರು ಕೊನೆಯ ಉಸಿರಿರುವವರೆಗೂ ಯಾವುದೇ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದು ಅವರು   ಟ್ವೀಟರ್‌ ಖಾತೆಯಲ್ಲಿ  ಹೇಳಿಕೆ ನೀಡಿದ್ದಾರೆ. ಗುವಾಹಟಿಯಲ್ಲಿ ನಡೆದ 65 ನೇ ಫಿಲ್ಮ್‌ಫೇರ್ ಉತ್ಸವದಲ್ಲಿ ಮನೋಜ್ ಮುಂಟಾಶೀರ್ ಅವರ ‘ಕೇಸರಿ’ ಚಿತ್ರದ ‘ತೇರಿ ಮಿಟ್ಟಿ ಮೇ’ ಹಾಡು ಅತ್ಯುತ್ತಮ ಗೀತೆ ವಿಭಾಗಕ್ಕೆ ನಾಮನಿರ್ದೇಶನಗೊಂಡಿತ್ತು. ಅದೇ ವಿಭಾಗದ ಇತರ ಹಾಡುಗಳ ಜೊತೆಗೆ, ಜೋಯಾ ಅಖ್ತರ್ ನಿರ್ದೇಶನದ ‘ಗಲ್ಲಿ ಬಾಯ್’ ಚಿತ್ರದ ‘ಅಪ್ನಾ ಟೈಮ್ ಆಯೆಗಾ’ ಹಾಡನ್ನು ಸಹ ನಾಮನಿರ್ದೇಶನ ಮಾಡಲಾಗಿತ್ತು. ಆದರೆ ಡಿವೈನ್ ಮತ್ತು ಅಂಕಿತ್ ತಿವಾರಿಯವರ ‘ಅಪ್ನಾ ಟೈಮ್ ಆಯೆಗಾ’   ಅತ್ಯುತ್ತಮ ಹಾಡು ಪ್ರಶಸ್ತಿ ಪಡೆದಿದ್ದು ಮನೋಜ್ ಅವರಿಗೆ ನಿರಾಶೆಯಾಗಿದೆ.

ಇದರಿಂದ ಕೋಪಗೊಂಡ ಮನೋಜ್ ‘ಗುಡ್ ಬೈ ಅವಾರ್ಡ್ಸ್’ ಎಂಬ ಶೀರ್ಷಿಕೆಯೊಂದಿಗೆ ಟ್ವೀಟರ್  ಬರೆದುಕೊಂಡಿದ್ದಾರೆ.   “ಡಿಯರ್ ಅವಾರ್ಡ್ಸ್. ನನ್ನ ಇಡೀ ಜೀವನದಲ್ಲಿ ನಾನು ಪ್ರಯತ್ನಿಸಿದರೂ ನನಗೆ ಇಂತಹ ಉತ್ತಮವಾದ ಸಾಲು ಬರೆಯಲು ಸಾಧ್ಯವಾಗುವುದಿಲ್ಲ .  ಲಕ್ಷಾಂತರ ಭಾರತೀಯರನ್ನು ಅಳುವಂತೆ ಮಾಡಿದೆ. ತಾಯ್ನಾಡನ್ನು ನೋಡಿಕೊಳ್ಳಲು ಪ್ರೋತ್ಸಾಹಿಸಿದೆ.ನಾನು ಇನ್ನೂ ನಿಮ್ಮ ಬಗ್ಗೆ ಕಾಳಜಿ ವಹಿಸಿದರೆ ಅದು ನನ್ನ ಕಲೆಗೆ ಮಾಡಿದ ಅವಮಾನ. ಅದಕ್ಕಾಗಿ ಗುಡ್ ಬೈ ಹೇಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

“ನಾನು ಅಧಿಕೃತವಾಗಿ ಘೋಷಿಸುತ್ತೇನ.  ನನ್ನ ಕೊನೆಯ ಉಸಿರಿರುವವರೆಗೂ ನಾನು ಯಾವುದೇ ಅವಾರ್ಡ್ ಶೋ ಗೆ  ಹಾಜರಾಗುವುದಿಲ್ಲ.  ವಿದಾಯ  ಎಂದು ಬರೆದುಕೊಂಡಿದ್ದಾರೆ. (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: