ಮೈಸೂರು

2018ರ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ

ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ನ ಬೃಹತ್ ಕಾರ್ಯಕರ್ತರ ಸಮಾವೇಶ ನಡೆಯಿತು. ಭಾನುವಾರದಿಂದಲೇ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯಕ್ಕೂ ಚಾಲನೆ ನೀಡಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಆರಂಭದಲ್ಲಿ ದಿವಂಗತ ಮಹದೇವಪ್ರಸಾದ್‌ ಅವರಿಗೆ ಕಾಂಗ್ರೆಸ್ ಮುಖಂಡರು  ಶ್ರದ್ಧಾಂಜಲಿ ಅರ್ಪಿಸಿದರು. ‌ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಮಹದೇವಪ್ರಸಾದ್ ಅಕಾಲಿಕ ನಿಧನದಿಂದ ವೈಯಕ್ತಿಕವಾಗಿ ಭಾರೀ ನಷ್ಟವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ನಂಬರ್ ಒನ್ ಸಚಿವರಾಗಿದ್ದ ಮಹದೇವಪ್ರಸಾದ್ ನನ್ನ ಆಪ್ತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಚಾಮರಾಜನಗರಕ್ಕೆ  ನನ್ನನ್ನು ಆರು ಭಾರಿ ಕರೆದುಕೊಂಡು ಹೋಗಿದ್ದರು.ಯಡಿಯೂರಪ್ಪನವರು ಎಲ್ಲಿ ಅಧಿಕಾರ ಕಳೆದುಕೊಳ್ಳುತ್ತೇನೋ ಅನ್ನೋ ಭಯದಲ್ಲಿ  ಹೋಗಲೇ ಇಲ್ಲಚಾಮರಾಜನಗರ ಭೇಟಿಯಿಂದ ನನ್ನ ಮುಖ್ಯಮಂತ್ರಿ ಸ್ಥಾನ ಭದ್ರವಾಯಿತು ಎಂದರು.

ಯಡಿಯೂರಪ್ಪ ಅಲ್ಲ ಯಾರೇ ತಿಪ್ಪರಲಾಗ ಹಾಕಿದರೂ 2018ರ ಚುನಾವಾಣೆಯಲ್ಲಿ ಮತ್ತೆ ನಾವೇ ಗೆಲ್ಲುವುದಲ್ಲದೇ, ನಾವೇ ಅಧಿಕಾರಕ್ಕೆ ಬರುತ್ತೇವೆ. ಮಹದೇವಪ್ರಸಾದಗೆ ನಿಜವಾದ ಶ್ರದ್ದಾಂಜಲಿ ಎಂದರೆ ಗೀತಾಮಹದೇವಪ್ರಸಾದ್ ಏಕಪಕ್ಷೀಯ ಚುನಾವಣೆ ಆಗಬೇಕಿದೆ. ಗೀತಾ ಮಹದೇವಪ್ರಸಾದ್ ದಾಖಲೆ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಯಡಿಯೂರಪ್ಪ ಸೈಕಲ್ ಕೊಟ್ಟಿದ್ದು,  ಸಂಧ್ಯಾ ಸುರಕ್ಷಾ ಯೋಜನೆ ಬಿಟ್ಟರೆ ಬೇರೇನು ಮಾಡಿಲ್ಲ. ಬರೀ ಸುಳ್ಳು ಆರೋಪ ಮಾಡುವುದೇ ಬಿಜೆಪಿ ಕೆಲಸವಾಗಿದೆ.ಸುಳ್ಳು ಹೇಳುವುದಕ್ಕೆ ಆರ್.ಎಸ್.ಎಸ್ ಚೆನ್ನಾಗಿ ತರಬೇತಿಯನ್ನು ನೀಡಿದೆ

ಮೋದಿ ಅಚ್ಚೆ ದಿನ್ ಆಯೇಗಾ ಎಂದಿದ್ದರು. ಎಲ್ಲಿ ಬಂತು. ಸಾಲ ಮನ್ನಾ ಮಾಡುವಂತೆ ಆರು ಬಾರಿ ಮನವಿ ಮಾಡಿದರೂ ಮೋದಿ ನಿರ್ಲಕ್ಷ್ಯವಹಿಸಿದ್ದಾರೆ. ಅದಕ್ಕಾಗಿ ಯಡಿಯೂರಪ್ಪ ಪಾರ್ಲಿಮೆಂಟ್ ಮುಂದೆ ಪ್ರತಿಭಟನೆ ಮಾಡಲಿ.ನಾವು ಕೊಟ್ಟ  125 ಭರವಸೆಗಳಲ್ಲಿ 120 ಭರವಸೆಗಳನ್ನು ಈಡೇರಿಸಿದ್ದೇವೆ
ಎಲ್ಲಾ   ಈಡೇರಿಸದಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ ಎಂದರು.

ಸಮಾವೇಶದಲ್ಲಿ ಸಚಿವರಾದ ಡಾ.ಹೆಚ್.ಸಿ. ಮಹಾದೇವಪ್ಪ, ಬಸವರಾಜ ರಾಯರೆಡ್ಡಿ, ತನ್ವಿರ್‌ಸೇಠ್. ಯೂ.ಟಿ.ಖಾದರ್. ಸಂಸದ ಧೃವನಾರಾಯಣ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್. ಕಾಂಗ್ರೆಸ್ ಅಭ್ಯರ್ಥಿ ಡಾ.ಗೀತಾ ಮಹದೇವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: