ಮೈಸೂರು

ಮಾ.14:ಪೆರೆಪೆಟ್ಲಮ್ಮ ಮತ್ತು ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ

ಆರ್ಯ ನಯನಜ ಕ್ಷತ್ರಿಯ ತೆಲುಗುರೆಡ್ಡಿ ಶ್ರೀರಾಮ ಮಂದಿರದಲ್ಲಿ 61 ನೇ ವರ್ಷದ ಶ್ರೀ ಅನಂತಪುರಮ್ಮ ಶ್ರೀ ಪೆರೆಪೆಟ್ಲಮ್ಮ ಮತ್ತು ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಪಾಧ್ಯಕ್ಷ ಗುರುಪ್ರಸಾದ್ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ   ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು ತಿಲಕ್ ನಗರದಲ್ಲಿರುವ ಶ್ರೀರಾಮ ಮಂದಿರದಲ್ಲಿ ಮಾ.14 ರಂದು 61 ನೇ ವರ್ಷದ ಶ್ರೀ ಅನಂತಪುರಮ್ಮ ಶ್ರೀ ಪೆರೆಪೆಟ್ಮಮ್ಮ ಮತ್ತು ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಈ ಪೂಜಾ ಮಹೋತ್ಸವಕ್ಕೆ ಚಾಮರಾಜ ಕ್ಷೇತ್ರದ ಶಾಸಕರಾದ ವಾಸು, ಪಾಲಿಕೆಯ  ಮಹಾಪೌರ ಎಂ.ಜೆ. ರವಿಕುಮಾರ್,  ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ  ವಿಶ್ವನಾಥ್, ಚಂದ್ರಶೇಖರ್,ವಿನಯ್,ಸುಧಾಕರ್,ಹರೀಶ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: