ಮೈಸೂರು

ಠಾಣೆ ಎದುರೇ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ : ಎಸ್ ಐ ಅಮಾನತು

ಯಾಸ್ಮಿನ್ ತಾಜ್

ಹಾಸನ ಜಿಲ್ಲೆಯ ಅರಸೀಕೆರೆ  ತಾಲೂಕಿನ ಗಂಡಸ ಹೋಬಳಿ ಬಿಸಲಹಳ್ಳಿಯ ವ್ಯಕ್ತಿಯೋರ್ವರಿಗೆ ಪೊಲೀಸರು ಕಳ್ಳತನದ ಆರೋಪ ಹೊರಿಸಿ ಕಿರುಕುಳ ನೀಡುತ್ತಿದ್ದರಿಂದ ವ್ಯಕ್ತಿ ಪೊಲೀಸ್ ಠಾಣೆಯ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಸಣ್ಣಸ್ವಾಮಿ ಅಲಿಯಾಸ್ ಶಿವನಂಜೇಗೌಡ(50) ಎಂದು ಗುರುತಿಸಲಾಗಿದೆ.  ಇವರ ಮೇಲೆ ಪೊಲೀಸರು ಕಳ್ಳತನ ಆರೋಪ ಹೊರಿಸಿದ್ದರಲ್ಲದೇ ಸಬ್ ಇನ್ಸಪೆಕ್ಟರ್ ಯಾಸ್ಮಿನ್ ತಾಜ್  ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ಪೊಲೀಸ್ ಠಾಣೆ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಸನ ಶವಾಗಾರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಭೇಟಿ ನೀಡಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ಎಸ್ಐ ಯಾಸ್ಮಿನ್ ತಾಜ್ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: